Sunday, December 1, 2024

Latest Posts

ಪನ್ನುಹ*ತ್ಯೆಗೆ ಸಂಚು ರೂಪಿಸಿದವನು ಈಗ ಅಮೇರಿಕಾ ವಶದಲ್ಲಿ

- Advertisement -

International News: ಸಿಖ್ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಭಾರತ ಮೂಲದ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯದಿಂದ ಅಮೇರಿಕಕ್ಕೆ ಹಸ್ತಾಂತರಿಸಲಾಗಿದೆ. ಪನ್ನು ಹತ್ಯೆ ಮಾಡಲು ಸಂಚು ನಡೆಸಿದ ಆರೋಪದ ಮೇಲೆ ನಿಖಿಲ್ ಅವರನ್ನು ಬಂಧಿಸುವಂತೆ ಅಮೇರಿಕ ಮಾಡಿದ್ದ ಮನವಿ ಮೇರೆಗೆ ಕಳೆದ ವರ್ಷ ಅವರನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು. ಇಂದು ಅವರನ್ನು ನ್ಯೂಯಾರ್ಕ್ ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಪನ್ನು ಅವರನ್ನು ಕೊಲ್ಲಲು ವೈಕ್ತಿಯೊಬ್ಬರಿಗೆ ಗುಪ್ತಾ ಸುಫಾರಿ ನೀಡಿದ್ದು, ಮುಂಗಡವಾಗಿ 15,000 ಡಾಲರ್ ಹಣವನ್ನು ನೀಡಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಜೆಕ್ ಗಣರಾಜ್ಯದಲ್ಲಿ ಬಂಧನದಲ್ಲಿದ್ದ ಗುಪ್ತಾ ಅವರನ್ನು ವಾರಾಂತ್ಯವೇ ಅಮೇರಿಕಕ್ಕೆ ಕರೆತರಲಾಗಿದೆ. ಸಾಮಾನ್ಯವಾಗಿ ಹಸ್ತಾಂತತರಗೊಂಡವರನ್ನು ಒಂದೇ ದಿನದೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಲಿಲ್ಲ, ಕೆಲವು ಸೂಕ್ಷ್ಮ ವಿಚಾರಗಳ ತನಿಖೆ ನಡೆಯುತ್ತಿರಬಹುದು ಎಂದು ಮೂಲಗಳು ತಿಳಿಸಿವೆ.

- Advertisement -

Latest Posts

Don't Miss