Sunday, December 1, 2024

Latest Posts

ಹುಬ್ಬಳ್ಳಿಯಲ್ಲಿ ಅಂಜಲಿ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೆಲ ತಿಂಗಳ ಹಿಂದೆ ಲವ್ ಜಿಹಾದ್‌ಗೆ ಬಲಿಯಾದ ಅಂಜಲಿ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಚೆಕ್ ಹಸ್ತಾಂತರ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ 5 ಲಕ್ಷದ ಚೆಕ್ ವಿತರಣೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಸಿಎಂ,  ಉಪಚುನಾವಣೆ ಬಹಳ ತಯಾರಿ ಮಾಡಿದ್ದೆವೆ. ಮೂರು ಕ್ಷೇತ್ರದಲ್ಲಿ ಗೆಲ್ತೆವೆ. ಜನ ಆಶೀರ್ವಾದ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಸಿಎಂ, ಭಾವನಾತ್ಮಕ ವಾಗಿ ಮಾತಾಡೊದು, ಅಳೋದು ನೋಡಿ ಸಾಕಾಗಿದೆ. ಇದಕ್ಕೆಲ್ಲ ಜನ ನೋಡಲ್ಲ. ಶಿಗ್ಗಾವಿಯಲ್ಲಿ ಖಾದ್ರಿ ಬಂಡಾಯವಾಗಿ ನಾಮಪತ್ರ ಹಾಕಿದ್ದಾರೆ. ಪಠಾಣ ಅವರನ್ನು ನಾವು ಟಿಕೆಟ್ ಕೊಟ್ಟೆದ್ದೇವೆ. ಇಬ್ಬರನ್ನ ಕೊಡಲು ಆಗಲ್ಲಾ. ಬಿಜೆಪಿ ಯವರು ಒಳ‌ಒಪ್ಪಂದ ಮಾಡಿಕೊಳ್ತಾರಾ. ಅವರು‌ ಸೋಲಲು ಅವರೇ ಕಾರಣ. ಹೋದ ಬಾರಿ 68 ಸಾವಿರ ಮತ ಪಡೆದಿದ್ದಾರೆ ಪಠಾಣ್. ಎದುರಾಳಿ ಇಲ್ಲದೇ ತಗೊಂಡ್ರಾ..? ಬೊಮ್ಮಾಯಿ ಗೆದ್ದಿರಬಹುದು. ಆದರೆ ಪಠಾಣ್ ಒಳ್ಳೆ ಫೈಟ್ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಯಾಕೆ ನಮಗೆ ಅಲ್ಲಿ ಲಿಡ್ ಬಂದಿದ್ದು. ಬೊಮ್ಮಾಯಿ ಕ್ಷೇತ್ರದಲ್ಲೇ ನಮಗೆ ಹೆಚ್ಚು ಮತ ಬಂದಿದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರ್ಮಥರು. ನಮಗೆ ಭರತ್ ಬೊಮ್ಮಾಯಿ ಸಮರ್ಥ ಎದುರಾಳಿ ಅಲ್ಲವೇ ಅಲ್ಲಾ. ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಡಲಾಗಿದೆ. ಈ‌ ಬಾರಿ ನಮಗೆ ಕೂಡಾ ಲಿಡ್ ಬರಲಿದೆ ಎಂದು ಸಿಎಂ ಹೇಳಿದರು.

ಇನ್ನು ಸೋಮಶೇಖರ್, ಬಿಜೆಪಿಯಿಂದ ಇನ್ನು 10 ಜನ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದು, ಆ ಬಗ್ಗೆ ಸಿಎಂ ಬಳಿ ಪ್ರತಿಕ್ರಿಯೆ ಕೇಳಿದಾಗ, ಅದನ್ನು ಅವರ ಬಳಿಯೇ ಕೇಳಿ ಎಂದು ಸಿಎಂ ಹೇಳಿದರು.

- Advertisement -

Latest Posts

Don't Miss