Wednesday, August 6, 2025

Latest Posts

ಜೀರೋ ಟ್ರಾಫಿಕ್‌ಗೆ ನೋ ಎಂದ ಸಿಎಂ ಸಿದ್ದರಾಮಯ್ಯ..

- Advertisement -

ಬೆಂಗಳೂರು: ಸಿಎಂ ಸೇರಿ ಹಲವು ರಾಜಕೀಯ ನಾಯಕರಿಗೆ ಕೊಡುವ ಜೀರೋ ಟ್ರಾಫಿಕ್ ಸೌಲಭ್ಯಕ್ಕೆ ಸಿಎಂ ಸಿದ್ದರಾಮಯ್ಯ ನೋ ಎಂದಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ, ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಸೌಲಭ್ಯ ನನಗೆ ಬೇಡ ಎಂದಿದ್ದಾರೆ.

ರಾಜಕೀಯ ವ್ಯಕ್ತಿಗಳಿಗೆ ಜೀರೋ ಟ್ರಾಫಿಕ್ ಕೊಟ್ಟಾಗ, ರೆಡ್ ಸಿಗ್ನಲ್ ಹಾಕಿ ಸಾಮಾನ್ಯ ಜನರಿಗೆ ಕೆಲ ಹೊತ್ತು ನಿಲ್ಲಿಸಲಾಗತ್ತೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯುಂಟಾಗುತ್ತದೆ. ಜನರಿಗೆ ಇಂಥ ಸಮಸ್ಯೆ ಆಗುವುದು ಬೇಡವೆಂಬ ಕಾರಣಕ್ಕೆ, ಸಿಎಂ ಸಿದ್ದರಾಮಯ್ಯ ಜೀರೋ ಟ್ರಾಫಿಕ್‌ಗೆ ನೋ ಎಂದಿದ್ದಾರೆ.

ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದಕ್ಕೆ ದೇವರಿಗೆ ವಿಶೇಷ ಪೂಜೆ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆ 8 ಸಚಿವರ ಪ್ರಮಾಣವಚನ ಸ್ವೀಕಾರ

ಕಾಂಗ್ರೆಸ್ ‌ನಿಧಾನವಾಗಿ ತನ್ನ ಬಣ್ಣ ಬದಲಾಯಿಸುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ

- Advertisement -

Latest Posts

Don't Miss