ಬೆಂಗಳೂರು: ಬಿಜೆಪಿ ಗಳಿಸಿದ ವೋಟ್ ಬಗ್ಗೆ ಮೈತ್ರಿ ನಾಯಕರು ಇದೀಗ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ. ಎಲ್ಲಿ ಹೋದ್ರೂ ಬಿಜೆಪಿ ವೋಟ್ ಬಗ್ಗೆ ಮಾತನಾಡೋ ನಾಯಕರು ಚುನಾವಣೆ ಫಲಿತಾಂಶದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕ್ತಿದ್ದಾರೆ. ಇದಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡ ಹೊರತಾಗಿಲ್ಲ.
ಇತ್ತೀಚೆಗೆ ಮೈತ್ರಿ ನಾಯಕರು ಜನರ ನಡುವೆ ವರ್ತಿಸುತ್ತಿರೋ ರೀತಿ ತೀವ್ರ ಚರ್ಚೆಗೆ ಗ್ರಾಸವಾಗ್ತಿದೆ. ಎಲ್ಲೇ ಜನರನ್ನು ಕಂಡ್ರೂ ನೀವು ಬಿಜೆಪಿಗೆ ವೋಟ್ ಹಾಕಿದ್ದೀರಿ, ನಮಗೆ ವೋಟ್ ಹಾಕಿದ್ದೀರೋ ಇಲ್ಲವೋ, ಅದೇನ್ ನೋಡಿ ಬಿಜೆಪಿಗೆ ವೋಟ್ ಹಾಕ್ತೀರೋ ಅಂತ ನೇರವಾಗಿ ಪ್ರಶ್ನಿಸಿ ಟೀಕೆಗೆ ಗುರಿಯಾಗ್ತಿದ್ದಾರೆ. ಈ ಸಾಲಿಗೆ ಇದೀಗ ಡಿಸಿಎಂ ಪರಮೇಶ್ವರ್ ಕೂಡ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಆರ್.ಟಿ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆಗೆಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಡಿಸಿಎಂ, ಲೋಕಸಭೆ ಚುನಾವಣೆ ಇದ್ದಿದ್ದರಿಂದ ಇಷ್ಟು ದಿನ ಇಲ್ಲಿಗೆ ಭೇಟಿ ನೀಡಲು ಆಗಲಿಲ್ಲ. ಈಗ ಕಾಮಗಾರಿ ಪರಿಶೀಲನೆಗೆ ಬಂದಿರುವೆ. ಇಲ್ಲಿ ಇರುವವರು ಯಾರು ನಮಗೆ ವೋಟ್ ಹಾಕಿದ್ದೀರೋ ಗೊತ್ತಿಲ್ಲ. ಆದ್ರೆ ಕೆಲವೊಬ್ಬರು ನಮಗೆ ವೋಟ್ ಹಾಕಿದ್ದಾರೆ. ಕೆಲವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಪರವಾಗಿಲ್ಲ ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ದಕ್ಷಿಣ ರಾಜ್ಯಗಳಲ್ಲಿ ಹಾರಲಿವೆಯ ಬಿಜೆಪಿ ಬಾವುಟ..??ಮಿಸ್ ಮಾಡದೇ ಈ ವಿಡಿಯೋ ನೋಡಿ