Saturday, March 2, 2024

Latest Posts

ಕೈ ಶಾಸಕನನ್ನು ಅಪಹರಿಸಿ ಬಿಜೆಪಿ ಆಸ್ಪತ್ರೆಗೆ ಸೇರಿಸಿದೆ- ದೋಸ್ತಿ ಆರೋಪ

- Advertisement -

ಬೆಂಗಳೂರು: ನಿನ್ನೆ ರಾತ್ರಿ ವರೆಗೂ ಆರೋಗ್ಯವಾಗಿದ್ದ ಕಾಗವಾಡದ ಕಾಂಗ್ರೆಸ್ ಶಾಸಕ ಆರೋಗ್ಯದ ನೆಪವೊಡ್ಡಿ ಮುಂಬೈನಲ್ಲಿ ಪ್ರತ್ಯಕ್ಷವಾದ ಘಟನೆ ಇದೀಗ ಮತ್ತೊಂದು ತಿರುವು ಪಡೆದಿದೆ. ಇದರ ಹಿಂದೆ ಬಿಜೆಪಿ ಕೈವಾಡ ನಡೆಸಿ ಶಾಸಕರನ್ನು ಬಲವಂತದಿಂದ ಕರೆದೊಯ್ದಿದೆ ಅಂತ ದೋಸ್ತಿ ಆರೋಪಿಸಿದ್ದಾರೆ.

ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡುವ ಉದ್ದೇಶದಿಂದ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲರನ್ನು ಬಿಜೆಪಿ ಆಪಹರಣ ಮಾಡಿ ಮುಂಬೈಗೆ ಕರೆದೊಯ್ದು ಬಲವಂತದಿಂದ ಆಸ್ಪತ್ರೆಗೆ ಸೇರಿಸಿದೆ ಅಂತ ಸದನದಲ್ಲಿ ಕಾಂಗ್ರೆಸ್ ನ ಡಿ.ಕೆ ಶಿವಕುಮಾರ್ ಮತ್ತು ದಿನೇಶ್ ಗುಂಡೂರಾವ್ ಆರೋಪ ಮಾಡಿದ್ರು. ಶಾಸಕ ಶ್ರೀಮಂತ್ ಪಾಟೀಲ್ ಗೆ ಜಾರಿಯಾಗಿದ್ದ ವಿಪ್ ಉಲ್ಲಂಘನೆ ಮಾಡುವಂತೆ ಸಂಚು ರೂಪಿಸಿ ಆರೋಗ್ಯವಾಗಿದ್ದ ಅವರನ್ನು ಸುಖಾಸುಮ್ಮನೆ ಎದೆನೋವಿನ ಕಾರಣ ನೀಡಿ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿದ್ದು ಇದನ್ನು ನಾವು ಸಾಬೀತು ಪಡಿಸುತ್ತೇವೆ ಅಂತ ಹೇಳಿದ್ರು.

ಇನ್ನು ಶಾಸಕ ಶ್ರೀಮಂತ್ ಪಾಟೀಲ್ ಮಧ್ಯರಾತ್ರಿ 1.30ಕ್ಕೆ ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟ್ ನಿಂದ ನಾಪತ್ತೆಯಾಗಿ ಚೆನ್ನೈ ವಿಮಾನ ನಿಲ್ದಾಣದ ಮೂಲಕ ಮುಂಬೈ ತಲುಪಿದ್ದಾರೆ. ಶ್ರೀಮಂತ್ ಪಾಟೀಲ್ ಗೆ ಬಿಜೆಪಿಯವರು ಸಾಥ್ ನೀಡಿದ್ದಾರೆ ಅಂತ ಫ್ಲೈಟ್ ಟಿಕೆಟ್ ನ ಕುರಿತಾದ ಮಾಹಿತಿಯನ್ನೂ ಸ್ಪೀಕರ್ ಗೆ ನೀಡಲಾಯ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಬಿಜೆಪಿ ಕುತಂತ್ರದಿಂದಾಗಿ ಶಾಸಕರು ಮಾನ ಮರ್ಯಾದೆಯಿಂದ ಓಡಾಡೋಕೆ ಸಾಧ್ಯವಾಗ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ರು.

ಜೋಡೆತ್ತುಗಳ ಕಡೇ ಆಟ ಸಕ್ಸಸ್ ಆಗುತ್ತಾ..??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=TSwlrZFoSvY

- Advertisement -

Latest Posts

Don't Miss