Thursday, June 25, 2026

Floor test

ಬೀಸೋ ದೊಣ್ಣೆಯಿಂದ ಪಾರಾದ ದೋಸ್ತಿ- ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ..!

ಬೆಂಗಳೂರು: ಇಂದು ನಿಗದಿಯಾಗಿದ್ದ ಸದನದ ಕಲಾಪದಲ್ಲಿ ಕೊನೆಗೂ ವಿಶ್ವಾಸಮತ ಯಾಚನೆಯಾಗದೇ ಮುಂದೂಡಿಕೆಯಾಗಿದೆ. ಇಂದು ಬೆಳಗ್ಗಿನಿಂದ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದ ವಿಧಾನಸಭಾ ಕಲಾಪ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧರಿಸಲಾಗಲಿಲ್ಲ. ವಿಶ್ವಾಸಮತ ಯಾಚನೆ ಮಾಡಿದ್ರೆ ಮೈತ್ರಿ ಸರ್ಕಾರಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ ಅಂತ ಅರಿತಿದ್ದ ದೋಸ್ತಿಗಳೂ ಕೊನೆಗೂ ಇಂದಿನ ಸದನವನ್ನು ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು...

ಬಿಜೆಪಿಗೆ ಸ್ಪಂದಿಸಿದ ರಾಜ್ಯಪಾಲರು- ಇಂದು ವಿಸ್ವಾಸಮತ ಯಾಚನೆ ಪೂರ್ಣಗೊಳಿಸುವಂತೆ ಸೂಚನೆ

ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತು ಸದನದಲ್ಲಿ ಉಂಟಾಗಿರುವ ಗದ್ದಲ ರಾಜ್ಯಪಾಲರ ಬಾಗಿಲು ಬಡಿಸಿತು. ಕಾಂಗ್ರೆಸ್-ಜೆಡಿಎಸ್ ವಿಶ್ವಾಸಮತ ಯಾಚನೆ ಮುಂದೂಡಿಕೆ ಮಾಡಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಇದಕ್ಕೆ ಸ್ಪಂದಿಸಿರೋ ರಾಜ್ಯಪಾಲರು ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸೂಚನೆ ನೀಡಿದ್ದಾರೆ. ಅತೃಪ್ತ ಶಾಸಕರು ವಿಪ್ ಉಲ್ಲಂಘನೆ...

ವಿಶ್ವಾಸಮತ ಯಾಚನೆಗೆ ಪಟ್ಟು- ರಾಜ್ಯಪಾಲರ ಮೊರೆಹೋದ ಬಿಜೆಪಿ

ಬೆಂಗಳೂರು: ಅತೃಪ್ತ ಶಾಸಕರ ವಿಪ್ ಉಲ್ಲಂಘನೆ ವಿಚಾರವಾಗಿ ನಿರ್ಧಾರ ಕೈಗೊಳ್ಳುವವರೆಗೂ ವಿಶ್ವಾಸಮತ ಯಾಚನೆ ಪ್ರಸ್ತಾಪ ಮುಂದೂಡಿಕೆ ಮಾಡಿ ಅನ್ನೋ ದೋಸ್ತಿ ಮನವಿಗೆ ಬಿಜೆಪಿ ಸಿಡಿದೆದ್ದಿದೆ. ಇಂದೇ ವಿಶ್ವಾಸಮತ ಯಾಚನೆಯಾಗಬೇಕು ಅಂತ ಪಟ್ಟು ಹಿಡಿದಿರೋ ಬಿಜೆಪಿ, ಇದೀಗ ರಾಜ್ಯಪಾಲರ ಮೊರೆ ಹೋಗಿದೆ. ಇವತ್ತು ವಿಶ್ವಾಸಮತ ಯಾಚನೆಯಲ್ಲಿ ದೋಸ್ತಿಗಳಿಗೆ ಹಿನ್ನಡೆ ಫಿಕ್ಸ್ ಅಂತ ಬೀಗುತ್ತಿದ್ದ ಬಿಜೆಪಿ...

ಕೈ ಶಾಸಕನನ್ನು ಅಪಹರಿಸಿ ಬಿಜೆಪಿ ಆಸ್ಪತ್ರೆಗೆ ಸೇರಿಸಿದೆ- ದೋಸ್ತಿ ಆರೋಪ

ಬೆಂಗಳೂರು: ನಿನ್ನೆ ರಾತ್ರಿ ವರೆಗೂ ಆರೋಗ್ಯವಾಗಿದ್ದ ಕಾಗವಾಡದ ಕಾಂಗ್ರೆಸ್ ಶಾಸಕ ಆರೋಗ್ಯದ ನೆಪವೊಡ್ಡಿ ಮುಂಬೈನಲ್ಲಿ ಪ್ರತ್ಯಕ್ಷವಾದ ಘಟನೆ ಇದೀಗ ಮತ್ತೊಂದು ತಿರುವು ಪಡೆದಿದೆ. ಇದರ ಹಿಂದೆ ಬಿಜೆಪಿ ಕೈವಾಡ ನಡೆಸಿ ಶಾಸಕರನ್ನು ಬಲವಂತದಿಂದ ಕರೆದೊಯ್ದಿದೆ ಅಂತ ದೋಸ್ತಿ ಆರೋಪಿಸಿದ್ದಾರೆ. ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡುವ ಉದ್ದೇಶದಿಂದ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲರನ್ನು...

ವಿಶ್ವಾಸಮತ ಯಾಚನೆ ಮುಂದೂಡಲು ಮನವಿ- ಕೊನೇ ಕ್ಷಣದಲ್ಲಿ ದೋಸ್ತಿ ಗೇಮ್ ಪ್ಲ್ಯಾನ್…!

ಬೆಂಗಳೂರು: ಸರ್ಕಾರದ ಅಳಿವು ಉಳಿವು ನಿರ್ಧಾರ ಮಾಡುವ ಇಂದಿನ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ದೋಸ್ತಿ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗ್ಗೆಯಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕಾದು ಕುಳಿತ ಬಿಜೆಪಿಗೆ ಇದೀಗ ದೋಸ್ತಿ ಶಾಕ್ ನೀಡಲು ತಂತ್ರ ಹೆಣೆದಿದೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾ ಲೋಪದ ಬಗ್ಗೆ ಇಂದು ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ....

ವಿಪ್ ವಿಚಾರವಾಗಿ ಬಿಎಸ್ವೈ ಗೊಂದಲ- ಡಿಕೆಶಿ ಕೆಂಡಾಮಂಡಲ- ತಬ್ಬಿಬ್ಬಾದ ಯಡಿಯೂರಪ್ಪ..!

ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತ ಸುಪ್ರೀಂಕೋರ್ಟ್ ಆದೇಶದ ಕ್ರಿಯಾಲೋಪದ ಬಗ್ಗೆ ಸದನದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಕ್ರಿಯಾಲೋಪ ವಿಚಾರವಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಶಾಸಕರಿಗೆ ಜಾರಿಮಾಡಲಾಗಿರುವ ವಿಪ್ ಕುರಿತು ಗೊಂದಲದ ಹೇಳಿಕೆ ನೀಡಿ ಬೆಸ್ತು ಬಿದ್ದ ಪ್ರಸಂಗ ನಡೆಯಿತು. ಸದನದಲ್ಲಿ ವಿಶ್ವಾಸಮತಯಾಚನೆ ಕುರಿತಾಗಿ ಮೈತ್ರಿ ಪಕ್ಷ...

‘ವಿಶ್ವಾಸಮತ ಯಾಚಿಸದೆ ಸಿಎಂ ವಚನಭ್ರಷ್ಟರಾಗ್ತಾರೆ’- ಬಿಜೆಪಿ ಶಾಸಕ ರಾಜೀವ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೆ ಮತ್ತೊಮ್ಮೆ ವಚನಭ್ರಷ್ಟರಾಗ್ತಾರೆ ಅಂತ ಬಿಜೆಪಿ ಶಾಸಕ ರಾಜೀವ್ ಹೇಳಿದ್ದಾರೆ. ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡಾ ರೆಸಾರ್ಟ್ ಬಳಿ ಮಾತನಾಡಿದ ಶಾಸಕ ರಾಜೀವ್, ಸಿಎಂ ವಿಶ್ವಾಸ ಮತ ಯಾಚನೆ ಮಾಡ್ತೀನಿ ಅಂದಿದ್ದೇ ಪ್ಲಸ್ ಪಾಯಿಂಟ್ ಅಂತ ಭಾವಿಸಲಾಗಿದೆ. ಆದ್ರೆ ಅಲ್ಪಮತಕ್ಕೆ ಸರ್ಕಾರ ಇಳಿದಾಗ ಸಿಎಂಗೆ ವಿಶ್ವಾಸ...
- Advertisement -spot_img

Latest News

Yallapura News: ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶಿವರಾಮ್ ಹೆಬ್ಬಾರ್

Yallapura News: ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ...
- Advertisement -spot_img