Sunday, September 8, 2024

Latest Posts

ಕೋರ್ಟ್ ಮೆಟ್ಟಿಲೇರಿದ್ಯಾಕೆ “ಮಕರ ಜ್ಯೋತಿ” ವಿವಾದ..!

- Advertisement -

Special Story:

ಅದೊಂದು ದಿನ  ಗೋಚರಿಸುವುದು ದೂರದ ಬೆಟ್ಟದಲ್ಲೊಂದು ವಿಶೇಷ ಬೆಳಕು..ಭಕ್ತರ ಪಾಲಿಗೆ ಅದು ತೃಪ್ತಿಯ ಬೆಳಕು ಆದರೆ ಅದೊಂದು ಸಮಯದಲ್ಲಿ ಕೋರ್ಟ್  ಮೆಟ್ಟಿಲೇರಿತ್ತು ಈ ಬೆಳಕಿನ ಚರ್ಚೆ…ಹಾಗಿದ್ರೆ ಈ ಬೆಳಕಿನ ಹಿಂದಿನ  ರಹಸ್ಯವೇನು..?! ಭಕ್ತಿಯ ಜ್ಯೋತಿ ಸ್ಕ್ಯಾಮ್ ಎಂದು ಚರ್ಚೆಯಾಗಿದ್ದಾದರೂ ಏಕೆ..? ಹೇಳ್ತೀವಿ ಈ ಬೆಳಕಿನ ಬೆನ್ನ ಹಿಂದಿನ ರಹಸ್ಯ….

ಮಣಿಕಂಠನ  ಸನ್ನಿಧಿಯಲ್ಲಿ ಗೋಚರಿಸುವುದು ವಿಶೇಷ ಬೆಳಕು. ಬೆಳಕ ನೋಡಲೆಂದೇ ಧಾವಿಸಿ ಬರುವ  ಭಕ್ತಾಧಿಗಳ ಗುಂಪು ಭಕ್ತಿಯ ಭಾವಕ್ಕೂ ಬೇರೆ ಯಾವುದೋ ಕಾರಣ ಆ ದಿನ ಮಾತ್ರ ಬೆಟ್ಟದ ತುದಿಯಲ್ಲಿ ಜ್ಯೋತಿ ಗೋಚರಿಸುವುದಂತೂ  ಖಂಡಿತ. ಹೌದು ಸುತ್ತ ಕಾನನದ ನಡುವೆ ಕಂಗೊಳಿಸುವುದೇವಿಶ್ವ ಪ್ರಸಿದ್ಧ ಭಾರತದ ಕೇರಳ ರಾಜ್ಯದ ಶಬರಿಮಲೆ ದೇವಸ್ಥಾನ ಅಲ್ಲಿಗೆ ಪ್ರಪಂಚದಾದ್ಯಂತದ ಜನರು ಅಯ್ಯಪ್ಪ ಸ್ವಾಮಿಯನ್ನು ಭೇಟಿ ಮಾಡಲು ಬರುತ್ತಾರೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ರಹಸ್ಯಗಳಿದ್ದರೂ, ನಮ್ಮನ್ನು ಆಶ್ಚರ್ಯಚಕಿತಗೊಳಿಸುವ ಒಂದು ರಹಸ್ಯ ಜ್ಯೋತಿಯ ರಹಸ್ಯ.

ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭೋಲೆನಾಥನು ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತನಾದನು ಮತ್ತು ಈ ಕಾರಣದಿಂದಾಗಿ, ಒಂದು ಮಗು ಜನಿಸಿತು, ಅದನ್ನು ಅವನು ಪಂಪಾ ನದಿಯ ತೀರದಲ್ಲಿ ಬಿಟ್ಟನು . ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವನ್ನೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲಾಯಿತು. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದನು. ಅದಕ್ಕಾಗಿಯೇ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಆತನ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಈ ಬೆಳಕನ್ನು ನೋಡಲು ಬರುತ್ತಾರೆ. ಭಕ್ತರು ಈ ದೇವರನ್ನು ಜ್ಯೋತಿ ಎಂದು ನಂಬುತ್ತಾರೆ ಮತ್ತು ದೇವರು ಅದನ್ನು ಭಕ್ತರಿಗಾಗಿ ಕಳುಹಿತ್ತಾನೆ ಎನ್ನುವ ನಂಬಿಕೆಯಿದೆ.

ಈ ಮಕರ ಜ್ಯೋತಿ ನಕ್ಷತ್ರವು ಕಾಣಿಸುತ್ತಿದ್ದಂತೆ ಅದನ್ನು ಪೂಜಿಸಲಾಗುತ್ತದೆ. ದೇವಾಲಯದ ಆಡಳಿತದ ಅರ್ಚಕರ ಪ್ರಕಾರ, ಮಕರ ತಿಂಗಳ ಮೊದಲ ದಿನ ಆಕಾಶದಲ್ಲಿ ಕಾಣುವ ವಿಶೇಷ ನಕ್ಷತ್ರವನ್ನೇ ಮಕರ ಜ್ಯೋತಿ ಎಂದು ಕರೆಯಲಾಗುತ್ತದೆ. ನಮ್ಮ ಆಕಾಶದಲ್ಲಿ ಗೋಚರಿಸುವ ಸೂರ್ಯನ ನಂತರ ಮಕರ ಜ್ಯೋತಿ ಎರಡನೇ ಪ್ರಕಾಶಮಾನವಾದ ನಕ್ಷತ್ರವಾಗಿದೆ, ಇದರ ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ಆದರೆ ಭಕ್ತರು ಹೇಳುವ ಪ್ರಕಾರ, ಇದು ನಕ್ಷತ್ರವಾಗಿದ್ದರೆ ಇಡೀ ಪ್ರಪಂಚಕ್ಕೆ ಕಾಣಿಸಬೇಕಾಗಿತ್ತು, ಆದರೆ ಕೇವಲ ಇಲ್ಲಿ ಮಾತ್ರ ಯಾಕೆ ಕಾಣಿಸುತ್ತದೆ ಎಂದು ಪ್ರಶ್ನೆಯನ್ನು ಮಾಡುತ್ತಾರೆ.

ಈ ಪ್ರಶ್ನೆ ಅದೊಂದು ಸಮಯದಲ್ಲಿ ಕೋರ್ಟ್ ಮೆಟ್ಟಿಲೇರುತ್ತೆ. ಹೌದು ಅದು 1999 2000 ಇಸವಿಯ ಸಮಯ  ಬೆಳಕಿನ ನೈಜತೆಯನ್ನು ತಿಳಿಯಲು ಸಾವಿರಾರು  ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು ಆದರೆ ದುರಾದೃಷ್ಟವಶಾತ್ ಆ ಸಮಯದಲ್ಲಿ ಅನೇಕ  ಭಕ್ತರು ಕಾಲ್ತುಳಿತಕ್ಕೆ ಒಳಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.ಈ ಸಮಯದಲ್ಲಿ ಈ ಜ್ಯೋತಿ ದೇಗುಲದ ಸ್ಕ್ಯಾಮ್ ಎಂದು ಕೇರಳದ ಹೈಕೋರ್ಟ್ ಮೆಟ್ಟಿಲೇರಿ  ತನಿಖೆ ನಡೆಸಿದಾಗ ಜ್ಯೋತಿಯ ವಿಚಾರವಾಗಿ ಅಚ್ಚರಿಯ ಮಾಹಿತಿಯೊಂದು ಬೆಳಕಿಗೆ ಬಂದಿತ್ತು.

ದೇಗುಲದ ಸಮಿತಿ ನೀಡಿದ ಉತ್ತರದಿಂದ  ಎಲ್ಲರೂ ಅಚ್ಚರಿಗೊಂಡಿದ್ದರು. ಹೌದು ಕೋರ್ಟ್ ವಿವರಣೆಯ ಪ್ರಕಾರವಾಗಿ ಅಲ್ಲೇ ಬೆಟ್ಟದಲ್ಲಿ ವಾಸಿಸುವ ಗಿರಿಜನರು ಇಂದಿಗೂ ಮಕರ ಸಂಕ್ರಾಂತಿಯಂದು ಕುಂಡವನ್ನು ಹಚ್ಚಿ ಜ್ಯೋತಿಯನ್ನು ಬೆಳಗುತ್ತಾರೆ ಅದೇ ಈಗಲೂ ಕಾಣುವ ಮಕರ ಜ್ಯೋತಿ. ಸ್ವಾಮಿಯು ಮಹಿಷಿಯನ್ನು ನಾಶಪಡಿಸಿ ಜನರನ್ನು ರಕ್ಷಣೆ ಮಾಡಿದ್ದರಿಂದ ಅವರು ದೇವರಿಗೆ ಆಭರಣವನ್ನು ಸ್ವಾಮಿಗೆ ನೀಡಿರುತ್ತಾರೆ ಅದೇ ಆಭರಣವು ಇಂದಿಗೂ ಅಯ್ಯಪ್ಪ ಸ್ವಾಮಿಗೆ  ಧರಿಸಲಾಗುತ್ತದೆ ಎಂಬುವುದಾಗಿಯೂ ಹೇಳಲಾಗುತ್ತದೆ. ಈ ಕಾರಣದಿಂದ ಕೃತಜ್ಙತೆಯ ಪ್ರತೀಕವಾಗಿ  ಗಿರಿಜನರು ಇಂದಿಗೂ ಬೆಟ್ಟದ ಮೇಲೆ  ದೇವರನ್ನು ಪೂಜಿಸಿ ಕುಂಡವನ್ನು ಹಚ್ಚಿ ಜ್ಯೋತಿ ಬೆಳಗುತ್ತಾರೆ ಈ ಜ್ಯೋತಿಯೇ ಮಕರ ಜ್ಯೋತಿಯಾಗಿ ಕಾಣಸಿಗುವುದು ಎಂಬುವುದಾಗಿ ಕೋರ್ಟ್ ವಿವರಿಸಿದೆ. ಒಟ್ಟಾರೆ ಅದೇನೆ ಇರಲಿ ಭಕ್ತರ ನಂಬಿಕೆ ಎಂದೂ ಸುಳ್ಳಾಗದು ಎಂಬುವುದಷ್ಟೇ ಸತ್ಯ.

ಅಯ್ಯಪ್ಪ ಸ್ವಾಮಿ ಭಕ್ತರು  ಕಪ್ಪು ಬಟ್ಟೆ ಧರಿಸೋದ್ಯಾಕೆ..?!ಏನಿದರ ಮಹತ್ವ

ಸಂಕ್ರಾಂತಿಯ ವಿಶೇಷತೆಗಳು ಹಾಗೂ ಪೂಜಾ ವಿಧಾನ..!

ಗುಡ್ ಲಕ್ ಗಾಗಿ ಸಂಕ್ರಾಂತಿಯದಿನ ಯಾವ ರಾಶಿಯವರು ಏನು ದಾನಮಾಡಬೇಕು..?

 

- Advertisement -

Latest Posts

Don't Miss