Friday, December 27, 2024

Latest Posts

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

- Advertisement -

Devotional:

ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ…? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ದೀಪವನ್ನು ಯಾರ ಮನೆಯಲ್ಲಿ ಬೆಳಗುತ್ತಾರೋ ಅವರ ಮನೆಯಲ್ಲಿ ದೈವಬಲ ಪ್ರಾಪ್ತಿಯಾಗುತ್ತದೆ ,ಶನಿ ಗುರೂ ,ಬುಧಗ್ರಹಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾರ ಮನೆಯಲ್ಲಿ ಹಣಕಾಸಿಸ ಭಾದೆಗಳು, ಋಣ ಬಾದೆಗಳು ,ಸಾಲದ ಸಮಸ್ಯೆಗಳು ,ಮನಸ್ಸಿಗೆ ಗೊಂದಲಗಳು, ಕಿರಿಕಿರಿಗಳು ಹಾಗೂ ಜಗಳಗಳು, ಹೆಚ್ಚಾಗಿರುತ್ತದೋ ಅವರು ಈ ದೀಪವನ್ನು ಮನೆಯಲ್ಲಿ ಬೆಳಗಿಸಿದರೆ ಅದ್ಬುತವಾದಂತ ಬದಲಾವಣೆಗಳು ಕಂಡುಬರುತ್ತದೆ . ಸಾಕ್ಷಾತ್ ಶಿವ ಪಾರ್ವತಿಯರಿಂದ ಮನೆಯಲ್ಲಿ ನೆಮದ್ದಿ ನೆಲೆಸುತ್ತದೆ, ಈ ಒಂದು ದೀಪಾರಾಧನೆಯನ್ನು ಯಾವ ದಿನ ಮನೆಯಲ್ಲಿ ಬೆಳಗಿಸಬಹುದು ಅನ್ನೋದಾದರೆ ,ಪ್ರತಿ ಸೋಮವಾರ ,ಶುಕ್ರವಾರ ,ಶನಿವಾರ ಹಾಗೂ ಅಮಾವಾಸ್ಯೆ , ಹುಣ್ಣಿಮೆಯ ದಿನ ಅಥವಾ ತಿಂಗಳಿಗೊಮ್ಮೆ ಬರುವ ಮಾಸಶಿವರಾತ್ರಿಯಾ ದಿನ, ಈ ದೀಪಾರಾಧನೆಯನ್ನು ನೀವೂ ಮಾಡಬೇಕು ,ಹಾಗಾದರೆ ಈ ದೀಪಾರಾಧನೆಯನ್ನು ಯಾವ ರೀತಿ ಮಾಡಬೇಕು ಎಂದು ತಿಳಿದು ಕೊಳ್ಳೋಣ .

ಮನೆಯಲ್ಲಿ ಶಿವನ ವಿಗ್ರಹ ಅಥವಾ ಫೋಟೋವಿನ ಮುಂದೆ ಈ ದೀಪಾರಾಧನೆಯನ್ನು ಮಾಡಬೇಕು ,ಮೊದಲು ಶಿವನಿಗೆ ವಿವಿಧ ಬಗ್ಗೆಯ ಫಲ, ಪುಷ್ಪಗಳಿಂದ ಅಲಂಕಾರ ಮಾಡಬೇಕು ,ನಂತರ ಒಂದು ತಟ್ಟೆ ಅಥವಾ ಬಾಳೆ ಎಲೆಯನ್ನು ತೆಗೆದುಕೊಂಡು ,ಅದರ ಮೇಲೆ ತೇಗಿನಕಾಯಿಯ ದೀಪವನ್ನು ಎಳೆಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಬೇಕು ಅರಿಶಿನ ,ಕುಂಕುಮ ಇಟ್ಟು ಶಿವನ ಸ್ಮರಣೆ ಮಾಡಿ ಎರಡೂ ಹೋಳುಗಳಿಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ನಂತರ ಬತ್ತಿಯನ್ನು ಇಟ್ಟು ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು. ದೀಪಾರಾಧನೆ ಮಾಡಬೇಕಾದರೆ ,ಅತಿಮುಖ್ಯವಾಗಿ  ಗಂಧದ ಕಡ್ಡಿಯನ್ನು ಹಚ್ಚಿಕೊಂಡು ಗಂಧದ ಕಡ್ಡಿಯಿಂದ ದೀಪಾರಾಧನೆ ಮಾಡಬೇಕು ,ಯಾವುದೇ ಕಾರಣಕ್ಕೂ ಬೆಂಕಿ ಪಟ್ಟಣದಿಂದ ನೇರವಾಗಿ ದೀಪವನ್ನು ಬೆಳಗಿಸಬಾರದು ,ಶಿವನಲ್ಲಿ ಸಂಕಲ್ಪಮಾಡಿ ದೀಪವನ್ನು ಬೆಳಗಿಸಬೇಕು .ನಿಮ್ಮ ಮನೆಯಲ್ಲಿ ಯಾರೂ ಬೇಕಾದರೂ ಈ ದೀಪಾರಾಧನೆಯನ್ನು ಮಾಡಬಹುದು .

ಈ ಒಂದೂ ದೀಪಾರಾಧನೆಯನ್ನು ನೀವೂ5 ಅಥವಾ 3ಸೋಮವಾರ ಅಥವಾ ಪ್ರತಿ ಸೋಮವಾರ ಮಾಡಬಹುದು,ವಿಶೇಷವಾಗಿ ಮನೆಯ ಯಜಮಾನ ತೆಂಗಿನಕಾಯಿ ದೀಪಾರಾಧನೆ ಮಾಡಿದರೆ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಅಖಂಡ ಯಶಸ್ಸು ಪ್ರಾಪ್ತಿಯಾಗುತ್ತದೆ. ಉದ್ಯೋಗ, ವ್ಯಾಪರದಲ್ಲಿ ನಷ್ಟವಿದ್ದವರು, ಈ ದೀಪವನ್ನೂ ಬೆಳಗಿಸುತ್ತಾಬಂದರೆ ಅವರೂ ಮಾಡುವ ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸು ಪ್ರಾಪ್ತಿಯಾಗುತ್ತದೆ. ಈ ದೀಪಾರಾಧನೆಯನ್ನು ನೀವೂ ವ್ಯಾಪರ ಮಾಡುವ ಸ್ಥಳದಲ್ಲೂ ಸಹ ವಿಶೇಷವಾಗಿ ಬೆಳಗಿಸಬಹದು. ಈ ದೀಪಾರಾಧನೆಯನ್ನು ಬೆಳಗ್ಗೆ ಅಥವಾ ಸಾಯಂಕಾಲ ಬೆಳಗಿಸಬಹುದು, ನೀವೂ ಪ್ರತಿದಿನ ನಿಮ್ಮ ಮನೆಯಲ್ಲಿ ಹಚ್ಚುವ ಎರಡು ದೀಪಾರಾಧನೆಗಳ ಜೊತೆಗೇ ಈ ಎರಡೂ ತೆಂಗಿನಕಾಯಿ ದೀಪಾರಾಧನೆಯನ್ನು ಬೆಳಗಿಸಬೇಕು. ಇದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ .

ದೀಪಾರಾಧನೆ ಮಾಡಿದ ನಂತರ ಆ ತೆಂಗಿನ ಕಾಯಿಯನ್ನು, ಮಾರನೆಯದಿನ ಒಂದು ಮರದ ಬುಡದ ಕೆಳಗೆ ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು ಹಾಗೂ ಆ ಅಕ್ಕಿಯನ್ನು ಪಕ್ಷಿಗಳಿಗೆ ಹಾಕಬೇಕು. ದೀಪಾರಾಧನೆ ಮಾಡಿದ ದೀನ ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಸೇವಿಸಿರಬಾರದು ಸ್ವಚ್ಛ ಮನಸ್ಸಿನಿಂದ ಈ ದೀಪಾರಾಧನೆಯನ್ನು ಮಾಡಬೇಕು, ಇದರಿಂದ ನಿಮಗೆ ಇರುವಂಥಹ ಪ್ರತಿಯೊಂದು ಕಷ್ಟಗಳೂ ಕಳೆದು ಹೋಗುತ್ತದೆ. ಎಷ್ಟೋ ಕುಟುಂಬಗಳೂ ಈ ತೆಂಗಿನಕಾಯಿ ದೀಪಾರಾಧನೆ ಮಾಡಿ ಒಳಿತನ್ನೂ
ಕಂಡಿರುವ ಉದಾಹರಣೆಗಳಿದೆ.

ಯಾವುದಾದರೂ ಅತಿಮುಖ್ಯವಾದ ಕೋರ್ಟ್ ಕೇಸ್, ಭೂಮಿಗೆ ಸಂಬಂದಿಸಿದ ಕೆಲಸ ಕಾರ್ಯಗಳು, ಸ್ವಂತ ಮನೆ ಕಟ್ಟುವ ಕೆಲಸಗಳು ಅರ್ಧಕ್ಕೆ ನಿಂತೂ ಹೋಗಿದ್ದರೆ ಹಾಗೂ ಮಕ್ಕಳಿಗೆ ಮದುವೆ ಭಾಗ್ಯ ಕೂಡಿಬರಬೇಕಾದರೆ, ಸಂತಾನ ಪ್ರಾಪ್ತಿ ಬೇಕಾದರೆ ,ಈ ಒಂದೂ ವಿಶೇಷವಾದ ದೀಪಾರಾಧನೆಯನ್ನು ಶಿವನ ಹೆಸರನ್ನ ಹೇಳಿ ಮಾಡುತ್ತಾಬರಬೇಕು ,ನಿಮ್ಮ ಪ್ರತಿಯೊಂದು ಕಷ್ಟಗಳನ್ನು ಕಳೆದು ಮನೆಯಲ್ಲಿ ದೈವಬಲ ನೆಲಸಬೇಕು ಎಂದರೆ ಈ ಒಂದೂ ತೆಂಗಿನ ಕಾಯಿಯ ದೀಪಾರಾಧನೆಯನ್ನೂ ಬಹಳ ಭಕ್ತಿ ,ನಂಬಿಕೆ ಹಾಗೂ ಶ್ರದ್ದೆಯಿಂದ ಶಿವನ ಸ್ಮರಣೆ ಮಾಡಿ ಮಾಡಬೇಕು , ಶಿವನಿಗೆ ಇಷ್ಟವಾಗುವಂತಹ ಈ ದೀಪಾರಾಧನೆ ಮಾಡಿದರೆ ನಿಮ್ಮ ಮೇಲೆ ಶಿವನ ಅನುಗ್ರಹ ಪ್ರಾಪ್ತಿಯಾಗುತ್ತದೆ .

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?

ಕಾರ್ತಿಕ ಹುಣ್ಣಿಮೆಯ ಪೂಜಾ ವಿಧಾನ…!

 

- Advertisement -

Latest Posts

Don't Miss