Saturday, May 25, 2024

Latest Posts

ಕಮೀಷನರೇಟ್ ಖಡಕ್ ಕಾರ್ಯಾಚರಣೆ: 11 ಬೈಕ್ ಪತ್ತೆ, ಇಬ್ಬರು ಆರೋಪಿತರು ಜೈಲಿಗೆ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಕಾರ್ಯಾಚರಣೆ ಮೂಲಕ ಅವಳಿನಗರದಲ್ಲಿ ಕಳ್ಳತನವಾಗಿದ್ದ 11 ಬೈಕ್ ಗಳನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣ ಪತ್ತೆ ಮಾಡಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ಆರೋಪಿತರಾದ ಪ್ರಕಾಶ ಬಾಬು ಕಾಂಬಳೆ, ವಿಷ್ಣು ಶಿವಣ್ಣ ನಂದ್ಯಾಳ ಎಂಬುವ ಇಬ್ಬರು ಆರೋಪಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗೋಕುಲ ರೋಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾದ ಒಟ್ಟು 4 ಮೋಟಾರ ಸೈಕಲ್, ಹಳೇಹುಬ್ಬಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 3 ಮೋಟಾರ ಸೈಕಲ್, ಹುಬ್ಬಳ್ಳಿ ವಿದ್ಯಾನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 1 ಮೋಟಾರ ಸೈಕಲ್, ಬೆಂಡಿಗೇರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ 1 ಮೋಟಾರ ಸೈಕಲ್ ಹಾಗೂ ವಿಜಯಪೂರ ಶಹರದಲ್ಲಿ ಕಳ್ಳತನವಾದ 2 ಮೋಟಾರ ಸೈಕಲ್‌ಗಳು ಹೀಗೆ ಒಟ್ಟು 7,80,000 ಮೌಲ್ಯದ 11 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss