Political News: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ನೀವು ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಬಿಜೆಪಿಗೆ ಚಾಲೆಂಜ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದೆ ಮಹುವಾ ಮೊಯಿತ್ರಾ ಪರ ಪ್ರಚಾರ ಮಾಡುವಾಗ ಭಾಷಣದ ವೇಳೆ ಮಾತನಾಡಿದ ಬ್ಯಾನರ್ಜಿ, ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ, ಕೇವಲ 200 ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ. ಅಲ್ಲದೇ, ಈ ಹಿಂದಿನ ಚುನಾವಣೆಯಲ್ಲಿ 200 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಆದರೆ ಕೇವಲ 77 ಸ್ಥಾನಗಳನ್ನು ಗೆದ್ದಿದ್ದರು ಎಂದು ಮಮತಾ ಬ್ಯಾನರ್ಜಿ ಟಾಂಟ್ ಕೊಟ್ಟಿದ್ದಾರೆ.
ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಾತನಾಡಿದ ಅವರು, ಯಾರೂ ಈ ಬಗ್ಗೆ ಅರ್ಜಿ ಸಲ್ಲಿಸಬಾರದು. ಈ ಕಾಯ್ದೆ ಪಶ್ಚಿಮ ಬಂಗಾಳದಲ್ಲಿ ನಡೆಯುವುದಿಲ್ಲವೆಂದು ಹೇಳಿದ್ದಾರೆ.
ಜೋಶಿಯವರನ್ನ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ
ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು