Friday, October 18, 2024

Latest Posts

ಕಾಮನ್‍ವೆಲ್ತ್: ವನಿತೆಯರ ಹಾಕಿ ತಂಡ ಪ್ರಕಟ: ಸ್ಥಾನ ಪಡೆಯುವಲ್ಲಿ ವಿಫಲರಾದ ರಾಣಿರಾಮ್‍ಪಾಲ್

- Advertisement -

ಹೊಸದಿಲ್ಲಿ: ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ 18 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಸ್ಟ್ರೈಕರ್ ರಾಣಿ ರಾಮ್‍ಪಾಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತಂಡ ಮುಂದಿನ ತಿಂಗಳು ನಡೆಯುವ ವಿಶ್ವಕಪ್‍ನಲ್ಲೂ  ಆಡಲಿದೆ.

ಗೋಲ್‍ಕೀಪರ್ ಸವೀತಾ ಪುಣಿಯಾ ತಂಡವನ್ನು ಮುನ್ನಡೆಸಲಿದ್ದು ಡಿಫೆಂಡರ್ ದೀಪಾ ಗ್ರೇಸ್ ಎಕ್ಕಾ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಇವರಿಬ್ಬರು ನೆದರ್‍ಲ್ಯಾಂಡ್ ಮತ್ತು ಸ್ಪೇನ್‍ನಲ್ಲಿ ನಡೆಯಲಿರುಯವ ವಿಶ್ವಕಪ್‍ನಲ್ಲಿ  ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಕಾಮ್‍ನ್‍ವೆಲ್ತ್ ಕ್ರೀಡಾಕೂಡಕ್ಕೆ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ.ಗೋಲ್ ಕೀಪರ್ ಬಿಚು ದೇವಿ ಖಾರಿಬಾಮ್ ಬದಲು ರಜನಿ ಎತಿಮಾರ್ಪುಗೆ ನೀಡಲಾಗಿದೆ.ಮಿಡ್‍ಫೀಲ್ಡರ್ ಸೋನಿಕಾ ಅವರನ್ನು ಕೈಬಿಡಲಾಗಿದೆ.  ಫಾರ್ವರ್ಡ್ ಆಟಗಾರ್ತಿ ಸಂಗೀತಾ ಕುಮಾರಿಗೆ ಮಣೆ ಹಾಕಲಾಗಿದೆ.

ಎ ಗುಂಪನಲ್ಲಿ ಸ್ಥಾನ ಪಡೆದಿರುವ ಭಾರತ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಗಯಾನಾ ತಂಡಗಳೊಂದಿಗೆ ಸೆಣಸಲಿದೆ.

ಟೋಕಿಯೊ ಒಲಿಂಪಿಕ್ಸ್‍ನಲ್ಲಿ ತಂಡವನ್ನು ಮುನ್ನಡೆಸಿ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ ರಾಣಿ ರಾಮಪಾಲ್ ಹ್ಯಾಮ್‍ಸ್ಟ್ರಂಗ್ ಇಂಜುರಿಯಿಂದ ಬಳಲುತ್ತಿದ್ದು  ಗುಣಮುಖರಾಗಬೇಕಿದೆ.

ಭಾರತ ಹಾಕಿ ತಂಡ: 

ಗೋಲ್‍ಕೀಪರ್: ಸವೀ

ತಾ (ನಾಯಕಿ), ರಜನಿ ಎತಿಮಾರ್ಪು

ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ

ಮಿಡ್‍ಫೀಲ್ಡರ್ಸ್‍: ನಿಶಾ, ಸುಶೀಲಾ ಚಾನು ಪುಕ್ರಾಂಬಾಮ್, ಮೋನಿಕಾ, ನೇಹಾ, ಜ್ಯೋತಿ, ನವಜೋತ್ ಕೌರ್, ಸಲೀಮಾ ಟೆಟೆ . 

ಫಾರ್ವಡ್ಸ್‍: ವಂದಾನಾ ಕಟಾರಿಯಾ, ಲಾಲೆರೆಮಸಿಯಾಮಿ, ನವನೀತ್ ಕವರ್, ಶರ್ಮಿಳಾ ದೇವಿ, ಸಂಗೀತಾ ಕುಮಾರಿ. 

 

 

 

 

- Advertisement -

Latest Posts

Don't Miss