Hubballi News: ಹುಬ್ಬಳ್ಳಿ: ಮಹದಾಯಿ ಯೋಜನೆ ವಿಳಂಬಕ್ಕೆ ಖಂಡನೆ ವ್ಯಕ್ತಪಡಿಸಿ, ಕೂಡಲೇ ಯೋಜನೆ ಆರಂಭಿಸಲು ಕ್ರಮಕ್ಕೆ ಒತ್ತಾಯಿಸಿ, ಕಳಸಾ ಬಂಡೂರಿ ಹೋರಾಟಗಾರ ಸುಭಾಷ್ ಚಂದ್ರ ಪಾಟೀಲ ನೇತೃತ್ವದಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಲಾಯಿತು.
ಮಯೂರಿ ಎಸ್ಟೇಟ್ ನಲ್ಲಿರುವ ಜೋಶಿ ನಿವಾಸದಲ್ಲಿ ಭೇಟಿ ಮಾಡಿ, ಯೋಜನೆಗೆ ಇರುವ ಅಡೆತಡೆ ನಿವಾರಿಸುವಂತೆ ರೈತರು ಆಗ್ರಹಿಸಿದ್ದಾರೆ. ಒಂದು ತಿಂಗಳೊಳಗೆ ಎಲ್ಲಾ ಅಡೆತಡೆ ನಿವಾರಿಸುವುದಾಗಿ ಜೋಶಿ ಭರವಸೆಯೂ ನೀಡಿದ್ದಾರೆ.
ಹಲವಾರು ಬಾರಿ ಗಡುವು ನೀಡಿದರು ಪ್ರಯೋಜನವಾಗಿಲ್ಲ. ಮಹದಾಯಿ ಯೋಜನೆ ಕೂಡಲೇ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ರೈತರು ಈ ವೇಳೆ ಎಚ್ಚರಿಕೆಯೂ ನೀಡಿದ್ದಾರೆ.
ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮ ಸ್ಪಂದನೆ ಸಿಕ್ಕಿದೆ. ಎಲ್ಲಾ ಅಡೆತಡೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ. ಯಡಿಯೂರಪ್ಪ ಈಗಾಗಲೇ ಬಜೆಟ್ ನಲ್ಲಿ ಅಗತ್ಯ ಅನುದಾನ ಇಟ್ಟಿದ್ದಾರೆ. ಒಂದು ತಿಂಗಳೊಳಗೆ ಅಡೆತಡೆ ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಜೋಶಿ ಹೇಳಿದ್ದಾರೆ.
ಇನ್ನು ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಸಲ್ಲ ಎಂದು ಮಾಜಿ ಸಚಿವ ಸೋಮಣ್ಣ ಬಂಡಾಯದ ಕುರಿತು ಜೋಶಿ ಪ್ರತಿಕ್ರಿಯಿಸಿದ್ದಾರೆ. ಸೋಮಣ್ಣ ಹೈಕಮಾಂಡ್ ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ. ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ. ಅಥವಾ ಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ. ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ. ಸೋಮಣ್ಣ ಪ್ರಮುಖ ನಾಯಕರು. ವೈಯಕ್ತಿಕವಾಗಿಯೂ ಆತ್ಮೀಯರಾಗಿದ್ದು ಅವರ ಜೊತೆ ಮಾತಾಡ್ತೇನೆ ಎಂದು ಜೋಶಿ ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಉತ್ತರ ಕರ್ನಾಟಕ ಕಡೆಗಣನೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿರುವ ಜೋಶಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಂತ ಭಾಗ ಮಾಡಲು ಆಗಲ್ಲ. ಒಂದು ವ್ಯವಸ್ಥೆಯೊಳಗೆ ಈ ಪ್ರಕ್ರಿಯೆ ಮಾಡಿದ್ದೇವೆ. ಉತ್ತರ ಕರ್ನಾಟಕಕ್ಕೆ ಮೊದಲ ಆದ್ಯತೆ ಕೊಟ್ಟವರು ಬಿಜೆಪಿ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಧ್ಯಕ್ಷರನ್ನು ನೇಮಿಸಿದ್ದು ಇದೇ ಬಿಜೆಪಿ. ಸಮಸ್ಯೆ ಏನಿದೆ ಅದನ್ನು ಬಗೆಹರಿಸಬೇಕು. ಅದನ್ನು ಬಿಟ್ಟು ಯಾರೊ ವ್ಯಕ್ತಿಯನ್ನು ನೇಮಕ ಮಾಡಿದಾಗ ಈ ಬಗ್ಗೆ ಚರ್ಚಿಸುವುದು ಸರಿಯಲ್ಲ ಎಂದಿದ್ದಾರೆ.
‘ಲೂಟಿ ಮಾಡುವವರಿಗೆ ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ’
‘ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್’



