ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ

bengalore news

ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಣಿಸುವ ವೇಳೆ ಹಣ ಕೊಟ್ಟು ಟಿಕೇಟ್ ಕೊಂಡುಕೊಳ್ಳುವುದು ನಿಯಮ . ಟಿಕೇಟ್ ಇಲ್ಲದ ಪ್ರಯಾಣ ದಂಡಕ್ಕೆ ಅಹ್ವಾನ ಎಂದು ಬಸ್ಸಿನಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ ಎಂಬಂತೆ ಅಲ್ಲಲ್ಲಿ ಪ್ರಯಾಣಿಕರಿಗೆ ಗೋಚರವಾಗುವ ಹಾಗೆ ಬರೆದಿರುತ್ತಾರೆ. ಹಾಗಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಟಿಕೆಟ್ ಪಡೆದುಕೊಳ್ಳುತ್ತಾರೆ ಆದರೆ ಹಣ ಕೊಟ್ಟರು ಅದನ್ನು ಜೇಬಿಗೆ ಇಳಿಸಿಕೊಂಡು ಟಿಕೇಟ್ ನೀಡದಿದ್ದರೆ ಹೇಗೆ ಹೇಳಿ.
ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ದಿಂದ ಬೆಳ್ಳಂದೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಮೂರು ಜನ ಪ್ರಯಾಣ ಮಾಡುವ ಸಲುವಾಗಿ ಟಿಕೆಟ್ ಪಡೆದುಕೊಳ್ಳ ಲು ನಿರ್ವಹಕನಿಗೆ ಹಣ ನೀಡಿರುತ್ತಾರೆ . ಆದರೆ ರಾಘವೇಂದ್ರ ನಾಯ್ಕ್ ಎನ್ನುವ ಕಂಡಕ್ಟರ್ ಟಿಕೆಟ್ ನೀಡಿರುವುದಿಲ್ಲ ಅದೇ ಸಮಯದಲ್ಲಿ ಆಗಮಿಸಿದ ವಿಚಕ್ಷಣ ದಳದ ಸಿಬ್ಬಂದಿಗಳು ಪ್ರಯಾಣಿಕರ ಟಿಕೆಟ್ ಪರಿಶಿಲಿಸುವ ವೇಳೆ ಆ ಮೂವರ ಹತ್ತಿರ ಟಿಕೆಟ್ ಇರದ ಕಾರಣ ಪ್ರಯಾಣಿಕರನ್ನು ಕೇಳೀದಾಗ ನಾವು ಹಣ ನೀಡಿದ್ದೇವೆ ಆದರೆ ಕಂಡಕ್ಟರ್ ಟಿಕೆಟ್ ನೀಡಿಲ್ಲ ಎಂದು ಹೇಳಿದ್ದಅರೆ. ಹಾಗಾಗಿ ಹಣ ಪಡೆದರೂ ನೀಡದಿರುವುದು ಬೆಳಕಿಗೆ ಬಂದಿದೆ. ಕರ್ತ್ವ್ಯ ಲೋಪ ಎಸಗಿದ ಕಂಟಕ್ಟರ್ಗೆ 3800 ರೂ ದಂಡ ವಿಧಿಸಿದ್ದಾರೆ. ಈ ದಂಡವನ್ನು ಪ್ರತಿ ತಿಂಗಳ ಸಂಭಳದಲ್ಲಿ 8 ಕಂತುಗಳಲ್ಲಿ ಕಡಿತಗೊಳಿಸಲಿದೆ.ಎಂದು ಬಿಎಂಟಿಸಿ ಪೂರ್ವವಲಯದ ಶಿಸ್ತು ಪಾಲನಾ ಅಧಿಕಾರಿಗಳು ಆದೇಶಿಸಿದ್ದಾರೆ.

ನಟ ತಾರಕರತ್ನ ಹೈದ್ರಾಬಾದ್ ಆಸ್ಪತ್ರೆಗೆ ಶಿಫ್ಟ್

ನಟ ಪೃಥ್ವಿರಾಜ್​ ಸುಕುಮಾರನ್ ಗೆ ಕೇರಳ ಹೈಕೋರ್ಟ್​ ರಿಲೀಫ್

ಚಿನ್ಮಯಿ ಶ್ರೀಪಾದ ಅವರಿಂದ ಸುವರ್ಣ ಸಂಜೆ

About The Author