Political News: ಇಷ್ಟು ದಿನ ಯಾರಾದ್ರೂ ಬೆಂಗಳೂರಿಗೆ ಹೋಗಿ ವಿಧಾನಸೌಧ ನೋಡಬೇಕೆಂದಿದ್ರೆ, ಆರಾಮವಾಗಿ ನೋಡಬಹುದಿತ್ತು. ಕೆಲವು ನಿಯಮಗಳನ್ನು ಅನುಸರಿಸಿ ಬಳಿಕ ವಿಧಾನಸೌಧವನ್ನು ಜನ ಫ್ರೀಯಾಗಿ ನೋಡಬಹುದಿತ್ತು. ಆದರೆ ಇದೀಗ ವಿಧಾನಸೌಧಕ್ಕೆ ಹೋಗಬೇಕಂದ್ರೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ, ದುಡ್ಡು ಕೊಟ್ಟು ಟಿಕೇಟ್ ಖರೀದಿಸಿ, ವಿಧಾನಸೌಧ ನೋಡಲು ಹೋಗಬೇಕು.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿಧಾನಸೌಧ ನೋಡಲು ಅವಕಾಶವಿರುತ್ತದೆ. ಇಷ್ಟರೊಳಗೆ ನೀವು ಬೆಂಗಳೂರು ಪ್ರವಾಸ ಮಾಡುವವರಿದ್ದರೆ, ಆನ್‌ಲೈನ್‌ನಲ್ಲಿ ಟಿಕೇಟ್ ಬುಕ್ ಮಾಡಿ, ವಿಧಾನಸೌಧವನ್ನು ನೋಡಬಹುದು. ಆದರೆ ಈ ಹೊಸ ರೂಲ್ಸ್ ಬಗ್ಗೆ ಶಾಸಕ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮೊದಲು ಸಾರ್ವಜನಿಕರು ಭದ್ರತೆಯ ಹಂಗಿಲ್ಲದೇ ವಿಧಾನಸೌಧ ಪ್ರವೇಶಿಸುತ್ತಿದ್ದರು ಈಗ ಶುಲ್ಕ ಪದ್ಧತಿ ಜಾರಿಗೆ ಬಂದಿದೆ. ಸಿದ್ದು ಟ್ಯಾಕ್ಸ್, ಡಿಕೆ ಟ್ಯಾಕ್ಸ್ ಜತೆಗೆ ಹೆಚ್ಚುವರಿ “ಖಾದರ್ ಟ್ಯಾಕ್ಸ್ ” ಗೆ ಅಭಿನಂದನೆಗಳು. ವಿಧಾನಸೌಧ , ಆಡಳಿತದ ಶಕ್ತಿ ಸೌಧ. ಆಡಳಿತ ಯಂತ್ರ ಕುಸಿದು, ಅಭಿವೃದ್ಧಿ ಮರೀಚಿಕೆಯಾಗಿರುವ ಈ ಸುಸಂದರ್ಭದಲ್ಲಿ ವಿಧಾನಸೌಧವನ್ನು ಪ್ರವಾಸೋದ್ಯಮಕ್ಕೆ ತೆರೆದಿಟ್ಟ ಸ್ಪೀಕರ್ ಯು.ಟಿ.ಖಾದರ್ ಅವರ ಈ ಕ್ರಮವನ್ನು ಅನಿವಾರ್ಯವಾಗಿ ಸ್ವಾಗತಿಸುತ್ತೇನೆ ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.