Tuesday, January 14, 2025

Latest Posts

“ಯಡಿಯೂರಪ್ಪನವರ ಮಗ”ನಿಗೆ ಅಭಿನಂದನೆಗಳು: ವಿಜಯೇಂದ್ರಗೆ ವಿಶ್ ಮಾಡಿ ಕಾಲೆಳೆದ ಕಾಂಗ್ರೆಸ್

- Advertisement -

Political News: ಬಿಜೆಪಿ ಸರ್ಕಾರದಲ್ಲಿ ಈವರೆಗೂ ರಾಜ್ಯಾಧ್ಯಕ್ಷನ ಪಟ್ಟ ಯಾರಿಗೆ ನೀಡಬೇಕೆಂದು ನಿರ್ಧಾರವಾಗಿರಲಿಲ್ಲ. ಆದರೆ ದೀಪಾವಳಿ ಬಂಪರ್ ಆಗಿ, ಇಂದು ಮಾಜಿ ಸಿಎಂ ಯಡಿಯೂರಪ್ಪನವರ ಮಗ, ಮತ್ತು ಬಿಜೆಪಿಯ ಕಾರ್ಯಕರ್ತ ಬಿ.ವೈ.ವಿಜಯೇಂದ್ರ ಅವರಿಗೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್, ಟ್ವೀಟ್ ಮಾಡುವ ಮೂಲಕ, ಬಿಜೆಪಿಯ ಕಾಲೆಳೆದಿದೆ.

“ಯಡಿಯೂರಪ್ಪನವರ ಮಗ” ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ “ಯಡಿಯೂರಪ್ಪನವರ ಮಗ”ನಿಗೆ ಅಭಿನಂದನೆಗಳು.. “ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ” ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ! ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್, ಬಿಜೆಪಿಗೆ ವ್ಯಂಗ್ಯ ಮಾಡಿದೆ.

ಈ ಹಿಂದೆ ಸದಾನಂದಗೌಡರು ರಾಜಕೀಯ ನಿವೃತ್ತಿ ತೆಗೆದುಕೊಂಡ ಬಗ್ಗೆ, ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಿದ ಬಗ್ಗೆ ಮತ್ತು ಈಶ್ವರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಂಡ ಬಗ್ಗೆಯೂ ರಾಾಜ್ಯ ಕಾಂಗ್ರೆಸ್, ವ್ಯಂಗ್ಯ ಮಾಡಿ ಟ್ವೀಟ್ ಮಾಡಿತ್ತು.

 

ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿಗೆ ಮುಖ್ಯ ಕಾರಣವೇ ಇದು: BSY ಸ್ಪಷ್ಟನೆ

ಬಿಡದಿವರೆಗೆ ಮೆಟ್ರೋ ಸಂಚಾರ ವಿಸ್ತರಣೆಗೆ ಚಿಂತನೆ: ಡಿ.ಕೆ.ಶಿವಕುಮಾರ್‌

ಚಂದ್ರಶೇಖರ್ ರಾವ್ ಹಸಿ ಹಸಿ ಸುಳ್ಳುಗಳನ್ನು ಯಾರೂ ನಂಬಬೇಡಿ: ತೆಲಂಗಾಣದಲ್ಲಿ ಸಿದ್ದು ಭರ್ಜರಿ ಪ್ರಚಾರ

- Advertisement -

Latest Posts

Don't Miss