‘ಇದರಲ್ಲೂ ಡೀಲ್ ಮಾಡಿಕೊಂಡ್ರಾ, ಬರೀ ಡೀಲ್ ನಿಮ್ದು’

ಹಾಸನ : ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಹಿನ್ನೆಲೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಈ .ಎಚ್..ಲಕ್ಷ್ಮಣ್ ನೇಮಕಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಅಲ್ಪಸಂಖ್ಯಾತರ ಪರ ಮಾತನಾಡುವ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಸಿದ್ರಾಮುಲ್ಲಾಖಾನ್ ಅಂತಾರೆ. ಅಂತಹ ಬಿಜೆಪಿಯಲ್ಲಿದ್ದವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಇದರಲ್ಲೂ ಡೀಲ್ ಮಾಡಿಕೊಂಡ್ರಾ, ಬರೀ ಡೀಲ್ ನಿಮ್ದು. ಇಪ್ಪತ್ತೈದು ವರ್ಷದಲ್ಲಿ ಒಬ್ಬನಾದ್ರು ಅಪ್ಪನಂತ ಒಳ್ಳೆಯ ಜಿಲ್ಲಾಧ್ಯಕ್ಷನನ್ನು ನೇಮಕ ಮಾಡಲು ಆಗಿಲ್ಲ. ನಾಚಿಕೆ ಆಗಬೇಕು ನಿಮಗೆ, ನಿಮ್ಮ ಹತ್ರ ದುಡ್ಡಿರಬಹುದು. ನಾವಿಲ್ಲದಿದ್ದರು ನೀವು ಏನು ಕಿತ್ಕಳಕೆ ಆಗಲ್ಲ ಎಂದು ಧ್ರುವನಾರಾಯಣ್ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು.

‘ಹೋರಾಟದಲ್ಲಿ ಪಕ್ಷ, ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ..?’

”ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ”.. ತಮ್ಮದೇ ನಾಯಕರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು..

About The Author