Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ದೇಶದ ಸೈನಿಕರಿಗೆ ಗೌರವ ಸಲ್ಲಿಸಲು ತಿರಂಗಯಾತ್ರೆ ಮಾಡಲಾಗುತ್ತಿದೆ. ಆಪರೇಷನ್ ಸಿಂಧೂರ್ ಬಗ್ಗೆ ಕೆಲ ಕಾಂಗ್ರೆಸ್ ನವರು ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದವು. ಆಗಿನವರು ಇಂತಹ ರಾಜಕೀಯ ಇಚ್ಚಾಶಕ್ತಿ ತೋರಿರಲಿಲ್ಲಾ ಎಂದು ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸಂತೋಷ್ ಲಾಡ್ ಗೆ ಪೋಬಿಯಾ ಕಾಡ್ತಿದೆ. ನಾರ್ಕೋಸಿಟಿಕಾ ಪರ್ಸನಾಲಿಟಿಯಿಂದ ಬಳಲುತ್ತಿದ್ದಾರೆ. ದೊಡ್ಡವರ ಬಗ್ಗೆ ಮಾತನಾಡಿದ್ರೆ ತಾನು ದೊಡ್ಡ ವ್ಯಕ್ತಿಯಾಗ್ತೇನೆ ಅನ್ನೋ ಭ್ರಮೆಯಲ್ಲಿದ್ದಾರೆ. ಅವರ ಇಲಾಖೆಯಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಅವರು ಅವರ ಜಿಲ್ಲೆ, ರಾಜ್ಯದ ಬಗ್ಗೆ ಮಾತಾಡೋದಿಲ್ಲಾ. ಪತ್ರಕರ್ತರು ಪ್ರಶ್ನೆ ಕೇಳಿದರೆ ನೀವು ಬಿಜೆಪಿ ಕಾರ್ಯಕರ್ತರು ಅಂತಾರೆ. ಅನೇಕ ಕಾಂಗ್ರೆಸ್ ನಾಯಕರು ಆಪರೇಷನ್ ಸಿಂಧೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲು ಕಾಂಗ್ರೆಸ್ ಏನು ಮಾತಡಬೇಕು ಅಂತ ನಿರ್ಧಾರ ಮಾಡಿಕೊಂಡು ಮಾತನಾಡಲಿ ಎಂದು ಜೋಶಿ ಹೇಳಿದ್ದಾರೆ.
ಕರ್ನಲ್ ಖುರೇಶಿ ಬಗ್ಗೆ ಬಿಜೆಪಿ ಸಚಿವ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅದರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಂಡಿದೆ. ಅಲ್ಲಿನ ಸಿಎಂ ಏನು ಮಾಡಬೇಕೋ ಅದನ್ನು ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಕೊತ್ತೂರು ಮಂಜುನಾಥ ಹೇಳಿಕೆಗೆ ಜೋಶಿ ಪ್ರತಿಕ್ರಿಯೆ ನೀಡಿದ್ದು, ಇದು ಪಾಕಿಸ್ತಾನದ ಭಾಷೆ. ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನ ಭಾಷೆಯನ್ನು ಬಳಕೆ ಮಾಡುತ್ತೆ. ಪಾಕಿಸ್ತಾನದಂತೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ಪಾಕಿಸ್ತಾನದವರು ಹಿಂದೂ ಟೆರರ್ ಅಂದ್ರೆ ಇಲ್ಲಿನ ಕಾಂಗ್ರೆಸ್ ನವರು ಹಿಂದೂ ಟೆರರ್ ಅಂದ್ರು. ಆರ್ಟಿಕಲ್ 371 ಸಮಯದಲ್ಲಿ ಪಾಕಿಸ್ತಾನ ಬ್ಲಾಕ್ ಡೆ ಅಂತು. ಕಾಂಗ್ರೆಸ್ ಸಹ ಬ್ಲಾಕ್ ಡೆ ಅಂತು. ಇದೇಲ್ಲಾ ಪಾಕಿಸ್ತಾನಕ್ಕೆ ಸಹಾಯ ಆಗುತ್ತೆ. ನಾವು ಪಾಕಿಸ್ತಾನವನ್ನು ಏಕಾಂಗಿ ಮಾಡಿದ್ದೆವೆ ಎಂದು ಜೋಶಿ ಹೇಳಿದ್ದಾರೆ.
ಇಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ.ಕಾಂಗ್ರೆಸ್ ಅನೇಕ ನಾಯಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಜನ ವಸತಿಯ ಪ್ರದೇಶದಲ್ಲಿ ಉಗ್ರನ ಒಂದೇ ಮನೆ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ಟೆಕ್ನಾಲಜಿ, ಭಾರತೀಯ ಸೇನೆ, ವಾಯುಪಡೆ ಪಡೆ ಯಲ್ಲಿ ಎಷ್ಟು ಬಲವಾಗಿದೆ. ಇದನ್ನು ಪಾಕಿಸ್ತಾನದವರೇ ಅಳುತ್ತಾ ಹೇಳುತ್ತಿದ್ದಾರೆ. ನಮಗೆ ಹೊಡೆದ್ರು , ನಮಗೆ ಹೊಡೆದ್ರು ಅಂತ ಅಳತ್ತಾರೆ. ಅಮೇರಿಕಕ್ಕೆ ಹೋಗಿ ಕಾಲು ಬಿದ್ದಿದ್ದಾರೆ. ಭಾರತದೊಳಗೆ ಇದ್ದವರಿಗೆ ಅನುಮಾನ ಇದೆ. ಇವರು ಚುನಾವಣಾ ಆಯೋಗ ನಂಬಲ್ಲಾ, ಸುಪ್ರೀಂ ಕೋರ್ಟ್ ನಂಬಲ್ಲಾ, ಸಂಸತ್ತನ್ನು ನಂಬಲ್ಲಾ, ರಾಷ್ಟ್ರಪತಿ ನಂಬಲ್ಲಾ. ಕೊನೆಗೆ ಸೈನ್ಯದ ಮೇಲೆ ನಂಬಿಕೆ ಇಲ್ಲಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.