Chikkaballapura News: ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಗ್ರಾಮ ಪರಿಕ್ರಮ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ದಿಬ್ಬೂರು ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ನಡಹಳ್ಳಿ, ಮಾಜಿ ಸಚಿವ ಡಾ.ಕೆ ಸುಧಾಕರ್ ಉಪಸ್ಥಿತರಾಗಿದ್ದರು. ಎರಡೇ ದಿನದಲ್ಲಿ ಕಾರ್ಯಕ್ರಮ ಫಿಕ್ಸ್ ಮಾಡಿದ್ದು, ರಾಜ್ಯಾಧ್ಯಕ್ಷರ ಆಗಮನದಿಂದ ಸಂತಸ ತಂದಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಬಿಜೆಪಿ ಅಧ್ಯಕ್ಷರಿಂದ ನಡೀತಿದೆ. ಸಣ್ಣ ವಯಸ್ಸಿನಲ್ಲಿ ವಿಜಯೇಂದ್ರಗೆ ಅಧಿಕಾರ, ಯೋಗ ಮತ್ತು ಯೋಗ್ಯತೆ ಎರಡೂ ಇದೆ. ಹೈನು ಮತ್ತು ಕೃಷಿ ನಮಗೆ ಎರಡು ಕಣ್ಣಗಳು. ಮೆಗಾ ಡೈರಿ ಇಲ್ಲಿಗೆ ಬರಬೇಕಾದ್ರೆ ಬಿಎಸ್ವೈ ಕಾರಣ. ಮೆಡಿಕಲ್ ಕಾಲೇಜು ಇಲ್ಲಿಗೆ ಬರಬೇಕಾದ್ರೆ ಅವರೇ ಕಾರಣ ಎಂದು ಸುಧಾಕರ್ ಹೇಳಿದ್ದಾರೆ.
ಯಡಿಯೂರಪ್ಪ ನಾಯಕತ್ವ ನೆಚ್ಚಿ ಅವರ ಬೆಂಬಲಕ್ಕೆ ನಿಂತೆ. ಅವರ ಮಗ ವಿಜಯೇಂದ್ರ ಅವರಿಗೂ ಸಹಕಾರ ನೀಡಲಿದ್ದೇನೆ. ಮೋದಿ ಕೊಟ್ಟ ಅಕ್ಕಿಯ ಪ್ರಚಾರದ ಲಾಭ ಕಾಂಗ್ರೆಸ್ ಪಡೀತಿದೆ. ರೈತರ ಸಹಾಯಧನ ಕಿತ್ತುಕೊಂಡ್ರು. ಹಿಂದುಳಿದ ಕಲ್ಯಾಣ ನಿಧಿ ಹಗಲು ದರೋಡೆ ಮಾಡಿದೆ. ದಲಿತ ಮುಖಂಡರೇ ಎನು ಮಾಡ್ತಿದಿರಿ ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.
ಇದರ ವಿರುದ್ದ ಹೋರಾಟ ಮಾಡಿ. ಕಾಂಗ್ರೆಸ್ ಸರ್ಕಾರ ಕಿತ್ತಾಕಿದಿನಿ ಅಂತಾ ನನ್ನ ವಿರುದ್ಧ ತನಿಖಾ ಕಮಿಷನ್ ಹಾಕಿದ್ದೀರಿ. ಮೂರು ಕಮೀಷನ್ ಹಾಕಿದ್ದೀರಿ ಇನ್ನೂ ನಾಲ್ಕು ಕಮೀಷನ್ ಹಾಕಿ ತನಿಖೆ ಮಾಡಿಸಿ. ಕಾಂಗ್ರೆಸ್ ಅಧಿಕಾರ ಬಂದ ನಂತ್ರ ಯಾರ ಉದ್ಧಾರ ಆಗಿದೆ. ಖುರ್ಚಿಗೋಸ್ಕರ ಸುಳ್ಳು ಹೇಳ್ತಿರಾ ಎಂದು ಸುಧಾಕರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’
ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್: ಸಚಿವ ಕೆ.ಎನ್.ರಾಜಣ್ಣ