ಸಕಲೇಶಪುರ: ಕಾಂಗ್ರೆಸ್ ಪಕ್ಷದ ವತಿಯಿಂದ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುರುಳಿಮೋಹನ್ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ 11ಗಂಟೆಗೆ ಶುಭ ಮಹೂರ್ತವಿದ್ದ ಕಾರಣ ಮೊದಲಿಗೆ ಮುರುಳಿಮೋಹನ್ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಅನ್ಮೋಲ್ ಜೈನ್ರವರಿಗೆ ನಾಮಪತ್ರ ಸಲ್ಲಿಸಿದ ನಂತರ ಶಕ್ತಿ ಪದರ್ಶನದ ರ್ಯಾಲಿಯಲ್ಲಿ ಭಾಗಿಯಾಗಿದ್ದರು.
ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಜೊತೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೊರಟು ಹಳೆ ಬಸ್ ನಿಲ್ದಾಣದ ಸಮೀಪ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದ ನಂತರ ಕಾರ್ಯಕರ್ತರ ಒತ್ತಾಸೆಯಂತೆ ನಾಸಿಕ್ ಬ್ಯಾಂಡ್ಗೆ ಕೆಲ ಕಾಲ ಕುಣಿದು ಕುಪ್ಪಳಿಸಿದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಅರೆ ಮಿಲಿಟರಿ ಪಡೆಗಳು ಹಾಗೂ ಪೋಲಿಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಹಳೆ ಬಸ್ ನಿಲ್ದಾಣದಲ್ಲಿ ಬಹಿರಂಗವಾಗಿ ಮಾತನಾಡಿದ ಮುರುಳಿಮೋಹನ್ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದರೆ ಪೋಸ್ಟ್ ಮ್ಯಾನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಸರಕಾರದಿಂದ ಬರುವ ಅನುಧಾನ ಮತ್ತು ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ವಿದ್ಯಾವಂತ ಪದವಿಧರರು ನಿರುದ್ಯೋಗಿಯಾಗಿದ್ದಾರೆ. ಅವರಿಗೆ ಹಂತಹಂತವಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.
ಕಳೆದ ಮೂವತ್ತು ವರ್ಷದಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜನ ಆಶೀರ್ವಾದ ತೋರಿಲ್ಲ, ಹಾಗಾಗಿ ಕಳೆದ ಹತ್ತು ವರ್ಷದಿಂದ ನಿಮ್ಮ ಸೇವೆಯಲ್ಲಿದ್ದೇನೆ ನಾನು ಕೂಡ ಈ ಊರಿನ ಅಳಿಯ ಹಾಗಾಗಿ ನಿಮ್ಮ ಸೇವೆಯನ್ನು ಮಾಡಲು ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಕ್ಷೇತ್ರದ ಜನತೆ ಹದಿನೈದು ವರ್ಷಗಳಿಂದ ಸತತವಾಗಿ ಜೆಡಿಎಸ್ ಪಕ್ಷಕ್ಕೆ ಅವಕಾಶ ಮಾಡಿಕೊಟ್ಟರು ಸಹ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಮುಂಬರುವ ವಿಧಾನಸಭಾಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ, ಒಂದೇ ವರ್ಷದಲ್ಲಿ ಈ ಕ್ಷೇತ್ರವನ್ನು ಬದಲಾವಣೆ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಹಾಗೂ ನಿಮ್ಮೆಲ್ಲರ ಕಷ್ಟ ಸುಖಗಳಿಗೆ ಬಾಗಿಯಾಗಿ ನಾನು ಸಾಯುವವರೆಗೂ ನಿಮ್ಮ ಜೊತೆಯಲ್ಲಿರುತ್ತೇನೆ ಎಂದರು.
ಈಗಾಗಲೇ ಮೂರು ಗ್ಯಾರಂಟಿಗಳನ್ನು ನಮ್ಮ ಪಕ್ಷ ಘೋಷಿಸಿದ್ದು ನುಡಿದಂತೆ ನಡೆದುಕೊಳ್ಳುವ ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷ, ಎಲ್ಲಾ ಧರ್ಮದವರನ್ನು ಎಲ್ಲಾ ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ.ಯಾವುದೇ ಕಾರಣಕ್ಕೂ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಮಾಡುವುದಿಲ್ಲ, ತನ್ನನ್ನು ಗೆಲ್ಲಿಸಿದಲ್ಲಿ ನಿಷ್ಠಾವಂತನಾಗಿ ಕ್ಷೇತ್ರದ ಜನರ ಸೇವೆ ಮಾಡುವುದಾಗಿ ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ರಾಮಚಂದ್ರು ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು ಸಾವಿರಾರು ಕಾರ್ಯಕರ್ತರು ಕ್ಷೇತ್ರದ ಜನತೆ ಸ್ವಯಂ ಪ್ರೇರಿತರಾಗಿ ಇಂದು ಮುರಳಿ ಮೋಹನ್ರವರ ನಾಮಪತ್ರ ಸಲ್ಲಿಕೆಗೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರವರು ಆಗಮಿಸಲಿದ್ದಾರೆ ಹಾಗೂ ಆ ಸಂದ‘ರ್ದಲ್ಲಿ 40,000ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು
ಈ ಸಂದ‘ರ್ದಲ್ಲಿ ಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಆಲೂರು ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಹೊನ್ನವಳ್ಳಿ ಗಣೇಶ್, ರಂಗನಾಥ್, ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭಾಸ್ಕರ್ ,ಕೆಪಿಸಿಸಿ ಸದಸ್ಯರಾದ ಸಲೀಂ ಕೊಲ್ಲಹಳ್ಳಿ ,ಯಡೇಹಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊದ್ದು ಲೋಕೇಶ್, ಕಿಸಾನ್ ಘಟಕದ ಜಗದೀಶ್, ಪುರಸಭಾ ಸದಸ್ಯೆ ಅನ್ನಪೂರ್ಣ, ಪಕ್ಷದ ಮುಖಂಡರುಗಳಾದ ಉದಯ್ , ಮುಪೀಜ್, ಬಾಗೆ ಚಾರ್ಲ್ಸ್ ಸೇರಿದಂತೆ ಬಹಳಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಮೆರವಣಿಗೆಯಲ್ಲಿ ತಂಡೋಪ ತಂಡವಾಗಿ ಭಾಗವಹಿಸಿದ್ದರು.
19 ಎಸ್.ಕೆ.ಪಿ.ಪಿ 1 ಸಕಲೇಶಪುರ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯಥಿ ಚುನಾವಣಾ ಅಧಿಕಾರಿ ಅನ್ಮೋಲ್ ಜೈನ್ರವರಿಗೆ ನಾಮಪತ್ರ ಸಲ್ಲಿಸಿದರು.
19ಎಸ್.ಕೆ.ಪಿ.ಪಿ 1-1ಸಕಲೇಶಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುರುಳಿಮೋಹನ್ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
‘ಗೆಲ್ತೀನಿ ಇಲ್ಲಾ ಸೋಲ್ತೀನಿ, ಆದ್ರೆ ಓಡಿ ಹೋಗೋದು ನನ್ನ ಚರಿತ್ರೆಯಲ್ಲೇ ಇಲ್ಲಾ’
‘ಭವಿಷ್ಯದ ದೊಡ್ಡ ರಾಜಕೀಯ ಬದಲಾವಣೆಗೆ ವರುಣಾದಲ್ಲಿ ಮುನ್ನುಡಿ ಬರೆದಿದ್ದೇನೆ.’




