Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ರಾಜ್ಯದ ಜನರಿಗೆ ಹತ್ತು ಕೆಜಿ ಅಕ್ಕಿ ರಾಜ್ಯ ಸರ್ಕಾರ ನೀಡುತ್ತಿಲ್ಲ. ಪ್ರತಿ ಕೆಜಿ 22.50 ಪೈಸೆ ಒಂದು ಕೆಜಿ ಅಕ್ಕಿ ನೀಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಈಗ ಮುಂದಾಗಿದೆ. ದರ ಕಡಿಮೆ ಮಾಡಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಆರ್ಡರ್ ಬಂದಿಲ್ಲ ಎಂದಿದ್ದಾರೆ.
ಎಫ್ ಸಿಐದಲ್ಲಿ ಅಕ್ಕಿ ಲಭ್ಯವಿದೆ ರಾಜ್ಯ ಸರ್ಕಾರ ಬೇಕಾದ್ರೆ ಕಡಿಮೆ ದರದಲ್ಲಿ ಅಕ್ಕಿ ಕೊಂಡುಕೊಳ್ಳಬಹದು. ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಅಕ್ಕಿ ನೀಡಿದ್ರೆ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ಹಣ ಉಳಿಯುತ್ತದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ರೆ ನಮ್ಮಿಂದ ಕಡಿಮೆ ದರದಲ್ಲಿ ಅಕ್ಕಿ ತೆಗೆದುಕೊಳ್ಳಬಹದು. ಈ ಹಿಂದೆ ಈಗಾಗಲೇ ರಾಜ್ಯ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಎರಡು ಬಾರಿ ಅಕ್ಕಿಗಾಗಿ ಕೇಂದ್ರದ ಬಳಿ ಮನವಿ ಮಾಡಿದ್ದರು. ಆದ್ರೆ ಮತ್ತೆ ಅದರ ಬಗ್ಗೆ ಯಾವುದೇ ಮನವಿ ಮಾಡಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸ್ವಾಮಿತ್ವ ಯೋಜನೆ 100% ಭಾರತ ಸರ್ಕಾರದ ಯೋಜನೆ ಎಂದಿರುವ ಜೋಶಿ, ಆದರೆ ಈ ಯೋಜನೆಗೆ ರಾಜ್ಯ ಸರ್ಕಾರದ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದ್ದಾರೆ. ಆದರೆ ಇದು ಪ್ರಧಾನಿಗಳ ಬಹು ಆಕಾಂಕ್ಷೆಯ ಯೋಜನೆ. ಆರಂಭದಲ್ಲಿ ರಾಜ್ಯದಲ್ಲಿ 30,715 ಹಳ್ಳಿಗಳ ಸರ್ವೆ ಕಾರ್ಯ ಈ ಯೋಜನೆಯಡಿ ಗುರಿ ಹೊಂದಲಾಗಿದೆ. ಕೆಂದ್ರ ಸರ್ಕಾರ 560 ಕೋಟಿ ಹಣ ಬಿಡುಗಡೆ ಮಾಡಿದೆ. ದೇಶದಲ್ಲಿ 3 ಲಕ್ಷ ಹಳ್ಳಿಗಳ ಸರ್ವೆ ಕಾರ್ಯ ನಡೆದಿದೆ. ಗ್ರಾಮೀಣ ಭಾಗದಲ್ಲಿ ಭೂ ವ್ಯಾಜ್ಯ, ಗಡಿ ಸಮಸ್ಯೆ, ಕಡಿಮೆ ಆಗಿದೆ.
ಆದರೆ ನಿನ್ನೆ ಉದ್ಘಾಟನೆ ಮಾಡಿದ ಆಹ್ವಾನ ಪತ್ರದಲ್ಲಿ ಪ್ರಧಾನಿ ಮಂತ್ರಿ ಪೋಟೋ ಇಲ್ಲ. ಇದು ಚಿಲ್ಲರೆತನ ಕರ್ನಾಟಕ ಸರ್ಕಾರ, ಈ ಚಿಲ್ಲರೆ ರಾಜಕೀಯ ಬಿಡಬೇಕು. ಈ ಯೋಜನೆಗೆ ಡ್ರೋನ್ ಸರ್ವೆ ಮಾಡಿಸುತ್ತಿರೋದು ಕೇಂದ್ರ ಸರ್ಕಾರ. ಹಣ ನೀಡುತ್ತಿರುವುದು ಕೇಂದ್ರ ಸರ್ಕಾರ ಆದರೆ ಇದನ್ನು ಮರೆಮಾಚಿ ರಾಜ್ಯ ಸರ್ಕಾರ ಚಿಲ್ಲರೆ ನಡೆ ತೋರಿದೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ವಾಕ್ಪ್ರಹಾರ ಮಾಡಿದ್ದಾರೆ.
ಕಾಂಗ್ರೆಸ್‌ನವರು ತಮ್ಮ ಜಗಳ ಬಿಜೆಪಿ ಮೈಮೇಲೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹತಾಶೆಯಿಂದ ಬಿಜೆಪಿ, ಬಿಜೆಪಿ ಅಂತ ಹೇಳುತ್ತಿದೆ. ನಕಲಿ ಗಾಂಧಿ ನೇತೃತ್ವದ ನಕಲಿ ಕಾಂಗ್ರೆಸ್ ಇದು. ನೀವು ಗಾಂಧಿ ಹೆಸರಿನಲ್ಲಿ ಜಾತ್ರೆ ಮಾಡುತ್ತಿದ್ದೀರಿ. ಈಗ ಅಂಬೇಡ್ಕರ್ ಮತ್ತು ಗಾಂಧಿ ಹೆಸರಿನಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೀರಿ. ಕಾಂಗ್ರೆಸ್ ನವರು ಅಂಬೇಡ್ಕರ್ ಗೆ ಘನಘೋರ ಅಪಮಾನ ಮಾಡಿದ್ದಾರೆ. ಅವರ ಮನೆ ಸ್ಮಾರಕ ಮಾಡಿಲ್ಲ, ಅವರನ್ನು ಸಂಸತ್ತಿಗೆ ಬರದಂತೆ ನೋಡಿಕೊಂಡಿದ್ದಾರೆ. ಇದೆಕ್ಕೆಲ್ಲಾ ಕಾಂಗ್ರೆಸ್ ಅಂಬೇಡ್ಕರ್ ಹಾಗೂ ದೇಶದ ಕ್ಷಮೆ ಕೇಳುತ್ತಾ..? ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಕ್ಕೆ ಕ್ಷೆಮೆ ಕೇಳುತ್ತಾರಾ..? ಎಂದು ಜೋಶಿ ಕೇಳಿದ್ದಾರೆ.
ಬಿಜೆಪಿ ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರು ಸಿಲುಕಿ ಹಾಕಿಕೊಂಡಿದ್ದಾರೆ. ನಾವು ಟಾರ್ಗೆಟ್ ಮಾಡಿದ್ರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬರುತ್ತಿರಲಿಲ್ಲ. ನಾವು ಯಾಕೆ ಕಾಂಗ್ರೆಸ್ ಸಮಾವೇಶಕ್ಕೆ ಹೆದರಿಕೊಳ್ಳಬೇಕು..? ಯಂಕ, ನೋಣ , ಸೀನ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ನವರಿಗೆ ಆಗಿದೆ. ಕಾಂಗ್ರೆಸ್ ಗೆ ಸ್ಟ್ಯಾಂಡ್ ಇಲ್ಲ ಇದು ಬಸ್ ಸ್ಟ್ತ್ಯಾಂಡ್ ಇದ್ದ ಹಾಗೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಅದು ನನಗೆ ಸಂಬಂಧಿಸಿದ ವಿಚಾರ ಅಲ್ಲ. ಆದರೆ ದೇಶಾದ್ಯಂತ ಪಕ್ಷದ ಚುನಾವಣೆ ನಡೆಯುತ್ತದೆ. ನಮ್ಮ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡೋದು ಬೇಡ. ನಿಮ್ಮ ಅಸಮಾಧಾನ ಏನೇ ಇರಲಿ ಅದನ್ನು ಪಕ್ಷದ ವರಿಷ್ಠರ ಗಮನಕ್ಕೆ ತನ್ನಿ. ಈ ರೀತಿ ಬಹಿರಂಗ ಹೇಳಿಕೆ ನೀಡೋದು ಸರಿಯಲ್ಲ ಎಂದು ಜೋಶಿ ಹೇಳಿದ್ದಾರೆ.
ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಗಾಂಧಿ ಬಾವಿಯಿಂದ ಸ್ವಚ್ಛಗೊಳಿಸುತ್ತೇವೆಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಬೆಳಗಾವಿಯಿಂದ ಸ್ವಚ್ಚ ಮಾಡೋದಲ್ಲ. ಕಾಂಗ್ರೆಸ್ ನ್ನೇ ಜನರು ದೇಶದಿಂದ ಸ್ವಚ್ಛ ಮಾಡುತ್ತಿದ್ದಾರೆ. ಕಾಂಗ್ರೆಸ್ ಸ್ವಚ್ಛ ಮಾಡೋದೇ ಆದ್ರೆ ಮೊದಲು ರಾಹುಲ್ ಗಾಂಧಿ ಮನಸ್ಥಿತಿ ಸ್ವಚ್ಛ ಮಾಡಲಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.