ಭಾರತ್ ಜೋಡೋ ನ್ಯಾಯ ಯಾತ್ರೆಗೆ 5 ದಿನ ಬ್ರೇಕ್ ಕೊಡಲಿದೆ ಕಾಂಗ್ರೆಸ್

National Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ 5 ದಿನ ವಿರಾಮ ನೀಡಲಾಗಿದೆ.

ರಾಹುಲ್ ಗಾಂಧಿಗೆ ಈ 5 ದಿನಗಳ ಕಾಲ ಕೆಲ ಸಭೆಯಲ್ಲಿ ಭಾಗವಹಿಸುವ ಕಾರಣಕ್ಕಾಗಿ ನ್ಯಾಯ ಯಾತ್ರೆಗೆ ಬ್ರೇಕ್ ನೀಡಲಾಗಿದೆ. ಫೆಬ್ರವರಿ 26ರಂದು ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆಯುವ ಚುನಾವಣಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 27 ಮತ್ತು 28ಕ್ಕೆ ರಾಹುಲ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಲಿದ್ದಾರೆ. ಬಳಿಕ ಮಾರ್ಚ್ 2ಕ್ಕೆ ಮತ್ತೆ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭವಾಗಲಿದೆ.

ದೆಹಲಿಯಲ್ಲಿ ನಡೆಯಲಿರುವ ಚುನಾವಣೆ ಸಭೆಯಲ್ಲಿ ಚುನಾವಣೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಇದೇ ದಿನ ರಾಹುಲ್ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ 2 ಉಪನ್ಯಾಸ ನೀಡಲಿದ್ದಾರೆ.

ಸದ್ಯ ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶದಲ್ಲಿದ್ದು, ಲಕ್ನೋ, ಕಾನ್ಪುರದಲ್ಲಿ ಪ್ರಚಾರ ನಡೆದಿದೆ. ಈ ಬಾರಿ 15 ರಾಜ್ಯಗಳನ್ನು ಸುತ್ತಲಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಉತ್ತರಪ್ರದೇಶದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ರಾಹುಲ್ ಅವರ ಭಾರತ್ ಜೋಡೋ ಯಾತ್ರೆಗೆ ಸೇರಬೇಕಿತ್ತು. ಆದರೆ ಅನಾರೋಗ್ಯ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿತ್ತು, ಉತ್ತರಪ್ರದೇಶದ ಭಾರತ್ ಜೋಡೋ ಯಾತ್ರೆಗೆ ಗೈರಾಗಿದ್ದಾರೆ.

ಜೂನಿಯರ್ ವಿರಾಟ್ ಆಗಮನ: ಅಕಾಯ್ ಎಂದು ನಾಮಕರಣ

ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..

ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

About The Author