Kolar Political News: ಕೋಲಾರ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ, ಸಂಸದರಾದ ಮುನಿಸ್ವಾಮಿ, ಕೋಲಾರ ನಗರದ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಭಕ್ತಾದಿಗಳಾಗಿ ಪ್ರಸಾದ ವಿತರಣೆ ಮಾಡಿದ ಬಳಿಕ ಮಾತನಾಡಿದ ಮುನಿಸ್ವಾಮಿ, ಈ ಕ್ಷಣಕ್ಕಾಗಿ 500 ವರ್ಷಗಳಿಂದ ರಾಮ ಭಕ್ತರು ಕಾಯುತ್ತಿದ್ದರು. ರಾಮನೇ ಪ್ರತ್ಯಕ್ಷವಾಗಿ ಅಯೋಧ್ಯೆಯಲ್ಲಿ ನಿಂತಿರುವ ಹಾಗೆ ಕಾಣ್ತಿದ್ದಾನೆ. ಆಲಿಬಾಬಾ 40 ಕಳ್ಳರು INDIA ಒಕ್ಕೂಟ ಕುತಂತ್ರ ಮಾಡ್ತಾರೆ. ರಾಮನ ಬ್ಯಾನರ್ ಗಳನ್ನು ಹರಿದು ಹಾಕುವ ಕೆಲಸ ಮಾಡಿದ್ದಾರೆ. ಆದ್ರೆ ಅವರ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗ್ತಾರೆ. ಇಂದು ದೇಶಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಪೂಜೆ ನಡೆಯುತ್ತಿದೆ. ಸಿದ್ದರಾಮುಲ್ಲಾ ಖಾನ್ ಭ್ರಮನಿರಶನವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಏಜೆಂಟ್ ಗಳಂತೆ ನಡೆದುಕೊಳ್ಳದಂತೆ ಬುದ್ಧಿ ಕೊಡಲಿ ಎಂದು ಸಂಸದ ಮುನಿಸ್ವಾಮಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಆವಣಿ ಕ್ಷೇತ್ರದಲ್ಲಿ ವಾಲ್ಮೀಕಿ ಆಶ್ರಮವನ್ನು ಅಭಿವೃದ್ಧಿ ಪಡಿಸಲಾಗುವುದು. ಲವ-ಕುಶರ ಜನ್ಮಸ್ಥಳ ಆವಂತಿಕ ಕ್ಷೇತ್ರ ರಾಮ , ಸೀತಾದೇವಿಯ ಪವಿತ್ರ ಸ್ಥಳ. ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಆವಣಿ ಕ್ಷೇತ್ರ ಅಭಿವೃದ್ಧಿ ಪಡಿಸುತ್ತೇವೆ. ಕೋಲಾರದಲ್ಲಿ ರಾಮಾಯಣ, ಮಹಾಭಾರತ ಕಾಲದ ಕುರುಹುಗಳು ಇವೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
‘ನಿಮಗೆ ಈ ಬಗ್ಗೆ ಮಾತನಾಡಲು ಧೈರ್ಯವಿಲ್ಲ, ಏಕೆಂದರೆ ರಾಮ ನಿಮ್ಮ ಚುನಾವಣಾ ಅಸ್ತ್ರ ಮಾತ್ರ’
‘ರಾಮನಿಗೆ ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ಪ್ರಾಣ ಪ್ರತಿಷ್ಠಾಪನೆಯಾಗಿದೆ’




