Thursday, December 5, 2024

Latest Posts

ಟೋಲ್ ಕಟ್ಟದೇ ಕಿರಿಕ್ ಮಾಡಿಕೊಂಡ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯ

- Advertisement -

Political News: ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ಟೋಲ್ ಕಟ್ಟಲು ಕಾಂಗ್ರೆಸ್ ಮುಖಂಡನೋರ್ವ ಕಿರಿಕ್ ಮಾಡಿದ್ದು, ಟೋಲ್ ಕಟ್ಟದೇ ಸಿಬ್ಬಂದಿ ಜೊತೆ ಜಗಳವಾಡಿದ್ದಾನೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಗಣಂಗಗೂರು ಟೋಲ್‌ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡನ ಕಾರ್‌ ಮೇಲೆ ಆತನ ಡೆಸಿಗ್ನೇಶನ್ ಹಾಕಲಾಗಿತ್ತು. ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯನೆಂದು ಹಾಕಿದ ಕಾರಣ, ಸರ್ಕಾರ ನಮ್ಮದಿದೆ ಹಾಗಾಗಿ ನಾವು ಟೋಲ್ ಕಟ್ಟುವುದಿಲ್ಲವೆಂದು ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾರೆ.

ತಾನು ಟೋಲ್ ಕಟ್ಟುವುದಿಲ್ಲವೆಂದು ಹೇಳಿದ್ದು, ನೀವು ಹಾಗೆಲ್ಲ ಮಾಡಲಾಗುವುದಿಲ್ಲ, ದೇಶದ ಎಲ್ಲ ನಾಗರಿಕರು ಟೋಲ್ ಕಟ್ಟಲೇಬೇಕು. ಯಾರೇ ಆದರೂ ಟೋಲ್ ಕಟ್ಟಬೇಕು, ಟೋಲ್ ಕಟ್ಟಿ ಎಂದು ಸಿಬ್ಬಂದಿ ಹೇಳಿದ್ದಾರೆ. ಅಷ್ಟಾದರೂ ಟೋಲ್ ಸಿಬ್ಬಂದಿ ಜೊತೆ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯ ಜಗಳವಾಡಿದ್ದಾನೆ.

ಬರೀ ಆತನಷ್ಟೇ ಅಲ್ಲದೇ, ಆತನೊಂದಿಗೆ ಕಾರಿನಲ್ಲಿ ಬಂದಿದ್ದ ಮಹಿಳೆಯೊಬ್ಬಳು, ಕಾರಿನಿಂದ ಇಳಿದು ಬಂದು, ಟೋಲ್‌ನಲ್ಲಿದ್ದ ಮಹಿಳಾ ಸಿಬ್ಬಂದಿಯ ಜುಟ್ಟು ಹಿಡಿದು ಎಳೆದಾಡಿದ ಘಟನೆ ನಡೆದಿದೆ. ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss