Friday, April 4, 2025

Latest Posts

ಜನರ ಕಿವಿಗೆ ಹೂ ಮುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಬಿ.ವೈ.ವಿಜಯೇಂದ್ರ

- Advertisement -

Chikkaballapura News: ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕು ದಿಬ್ಬೂರು ಗ್ರಾಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗ್ರಾಮ ಪರಿಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ನಾಯಕ ಬಿಎಸ್ ವೈ. ರೈತರ ಹೆಸರಲ್ಲಿ ಕಾಂಗ್ರೆಸ್ ನವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹೈನು ಉದ್ಯಮದವರಿಗೆ ನೀಡಬೇಕಾದ ಸಹಾಯಧನ ಇದುವರೆಗೂ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಭೀಕರ ಬರಗಾಲದ ಸಮಯದಲ್ಲಿ ಏಳು ತಾಸು ವಿದ್ಯುತ್ ನೀಡಲು ಆಗ್ತಿಲ್ಲ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಬರಗಾಲದಲ್ಲೂ ಏಳು ತಾಸು ವಿದ್ಯತ್ ನೀಡಲಾಗಿತ್ತು. ದರಿದ್ರ ಸರ್ಕಾರ ರಾಜ್ಯದಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.

ಗಂಡಸಿ ಶಿವರಾಂ ಸರಿಯಾಗಿ ಹೇಳಿದ್ದಾರೆ. ಅವರ ನಾಯಕರೇ ಅವರ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಶೇಕಡಾ 50% ಲಂಚ ಪಡೀತಿದಾರೆ ಅಂತಾ ಅವರೇ ಒಪ್ಪಿಕೊಂಡಿದ್ದಾರೆ. ಜನರ ಕಿವಿಗೆ ಹೂ ಮುಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇವಲ ಭಾಷಣ ಹೊಡೆದುಕೊಂಡು ಅಧಿಕಾರ ನಡೆಸ್ತಿದಾರೆ. ಇವರಿಗೆ ತಕ್ಕ ಉತ್ತರ ಕೊಡಬೇಕಿದೆ.

ಜನರು ಶಾಪ ಹಾಕೋಕೆ ಶುರು ಮಾಡಿದಾರೆ. ಅಭಿವೃದ್ಧಿ ಶೂನ್ಯ ಸರ್ಕಾರ. ಇಷ್ಟು ಕಡಿಮೆ ಅವಧಿಯಲ್ಲಿ ರಾಜ್ಯ ಸರ್ಕಾರ ನಂಬಿಕೆ ಕಳೆದುಕೊಂಡಿದೆ. ತೆರಿಗೆ ಏರಿಸುವ ಕೆಲಸ ಮಾಡ್ತಿದಾರೆ.ಅಭಿವೃದ್ಧಿ ಚಿಂತನೆ ಇವರಿಗಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’

ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌: ಸಚಿವ ಕೆ.ಎನ್.ರಾಜಣ್ಣ

- Advertisement -

Latest Posts

Don't Miss