Hubli News: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಕಾಂಗ್ರೆಸ್ ಸತತ ಸೋಲಿನಿಂದ ಹತಾಶೆಗೊಂಡಿದೆ. ಹರಿಯಾಣ, ಮಹಾರಾಷ್ಟ್ರದಲ್ಲಿ ಹೀನಾಯವಾಗಿ ಸೋತಿದೆ ವಿರೋಧ ಪಕ್ಷವೂ ಸಹ ಕಾಂಗ್ರೆಸ್ ಆಗಿಲ್ಲ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಸಂದೀಪ್ ಪಾತ್ರ ಅವರಿಗೆ ಮೊಣಕೈಯಿಂದ ತಳ್ಳಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆದ್ದ ನಂತರ ಇಡೀ ಜಗತ್ತೇ ಗೆದ್ದ ವರ್ತನೆ ತೋರುತ್ತಿದೆ. ರಾಹುಲ್ ಗಾಂಧಿ ತಮ್ಮ ಸೋಲನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ನೆಹರು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅತ್ಯಂತ ಘೋರ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ರಾಜೀನಾಮೆಯಿಂದ ಏನೂ ಫರಕ್ ಬಿಳಲ್ಲ ಅಂತ ಪತ್ರ ಬರೆದಿದ್ದಾರೆ. ನೆಹರು ಭಾರತ ರತ್ನ, ಇಂದಿರಾಗಾಂಧಿ ಭಾರತ ರತ್ನ, ರಾಜೀವ ಗಾಂಧಿ ಭಾರತರತ್ನ ತಮಗೆ ತಾವೇ ಕೊಟ್ಟುಕೊಂಡರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ಬೆಂಬಲಿತ ಕಾಂಗ್ರೆಸ್ ವಲ್ಲದ ಪಕ್ಷ ಬರಬೇಕಾಯಿತು. ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಸುಧೀರ್ಘ ಭಾಷಣ ಮಾಡಿದ್ದಾರೆ.
ನೆಹರು ಅವರು ಮೀಸಲಾತಿ ಬಗ್ಗೆ ಕ್ವಾಲಿಟಿ ಬಗ್ಗೆ ಮಾತನಾಡಿದ್ದು ರೆಕಾರ್ಡ್ ಇದೆ. ಈ ವಿಚಾರವಾಗಿ ಕರ್ನಾಟಕದಲ್ಲಿ ಸದನದಲ್ಲಿ ಗಲಾಟೆ ಮಾಡಿ. ಸಿ.ಟಿ.ರವಿ ಅವರನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಮಾತು ಸರ್ಕಾರಗಳು ಬದಲಾಗುತ್ತವೆ. ವಾಟ್ ಬ್ಲೆಡಿ ಡಿಡ್ ಮಿಸ್ಟರ್ ಕಮಿಷನರ್..
ಅಧಿಕಾರಿಗಳು ಕಾನೂನು ಬಾಹಿರ ಅಧಿಕಾರ ಬಳಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಸಿಟಿ ರವಿಗೆ ನಮ್ಮ ಪಕ್ಷ ಎಲ್ಲಾ ಸಹಾಯ ಮಾಡುತ್ತದೆ. ಅಧಿಕಾರದ ವರ್ತನೆಯನ್ನ ತೀವ್ರವಾಗಿ ಖಂಡನೆ ಮಾಡುತ್ತೇನೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ತರಾತುರಿಯಲ್ಲಿ ಸಿಟಿ ರವಿ ವಿರುದ್ಧ ಎಫ್ ಐ ಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್ ಗೆ..? ಬೆಳಗಾವಿ ಕಮಿಷನರ್ ಅನ್ ಫಿಟ್ ಇದಾರೆ. ಖಾನಾಪುರದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಜೊತೆಗೆ ಕಮಿಷನರ್ ಯಾಕೆ ಮಾತನಾಡಿಲ್ಲ..? ಸಂವಿಧಾನಕರ ಹುದ್ದೆಯಲ್ಲಿರುವ ವಿಪಕ್ಷ ನಾಯಕ ಆರ್ ಅಶೋಕ್ ರನ್ನು ಸಹ ಖಾನಾಪೂರ ಠಾಣೆಗೆ ಬಿಟ್ಟಿಲ್ಲ. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜೊತೆಗೆ ಕಮಿಷನರ್ ಹಾಗೆ ನಡೆದುಕೊಂಡ್ರಾ..? ನಾವು ಯಾವತ್ತೂ ಅಸ್ಪೃಶ್ಯತೆಯನ್ನು ಬೆಂಬಲಿಸಿಲ್ಲ ಎಂದು ಜೋಶಿ ಹೇಳಿದರು.
ಆದರೆ ಬೆಳಗಾವಿ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರು ಅಂತ ಆ ರೀತಿಯ ನಡೆದುಕೊಂಡಿರಬಹದು. ಸಿಟಿ ರವಿ ಅವರ ಫೇಕ್ ಎನ್ ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ..? ಕಬ್ಬಿನ ಗದ್ದೆಗೆ, ಕಂಕರ್ ಮಿಶಿನ್ ಗೆ , ಅರಣ್ಯಕ್ಕೆ ಯಾಕೆ ಸಿಟಿ ರವಿ ಅವರನ್ನು ಕರೆದುಕೊಂಡು ಹೋಗಿದ್ದರು..? ಮಾಧ್ಯಮವರು ಸಾಹಸ ಮಾಡಿ ಸಿಟಿ ರವಿ ಅವರನ್ನು ಬೆನ್ನುಹತ್ತಿದ್ದಕ್ಕೆ ಸಿಟಿ ರವಿ ಉಳಿದಿದ್ದಾರೆ. ಇದು ರಾಜಕೀಯದ ಅತ್ಯಂತ ದ್ವೇಷ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಜೇಬಿನಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದ್ರೆ ಅವರ ಉದ್ದೇಶವೇನು..?
ನೀವು ಬಳ್ಳಾರಿಗೆ ಹೋಗಿ ತೊಡೆತಟ್ಟಿದಾಗ ನಮ್ಮ ಸರ್ಕಾರ ಇತ್ತು ಆಗ ಪೊಲೀಸರ ರಕ್ಷಣೆ ಇತ್ತಲ್ವಾ.? ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಕಾಂಗ್ರೆಸ್ ನವರಿಗೆ ಯಾವ ನಾಯಿ ಕಡಿದಿತ್ತು…? ವಿವಿಧ ಸಂದರ್ಭದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಏನು ನಾಯಿ ಕಡಿದಿತ್ತಾ..? ಕಾಂಗ್ರೆಸ್ ನವರು ನಾಯಿ ಕಡಿದವರಂತೆ ವರ್ತನೆ ಮಾಡುತ್ತಿದ್ದಾರೆ. ಸಿಟಿ ರವಿ ಪ್ರಕರಣದ ಬಗ್ಗೆ ರಾಜ್ಯ ಗೃಹ ಸಚಿವರಿಗೆ ಏನು ಗೊತ್ತಿಲ್ಲ ಅಂದ್ರೆ ಹೇಗೆ.? ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಆಕ್ರೋಶ ಹೊರಹಾಕಿದ್ದಾರೆ.