Political News: ಹುಬ್ಬಳ್ಳಿ: ದೇಶಾದ್ಯಂತ ಕಾಂಗ್ರೇಸ್ ಪಕ್ಷ ನಶಿಸಿ ಹೋಗ್ತಾ ಇದೆ. ಕಾಂಗ್ರೇಸ್ ಪಕ್ಷ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಆಗೋಕು ಯೋಗ್ಯವಲ್ಲದ ಸ್ಥಿತಿ ಇದೆ. ಪ್ರಧಾನ ಮಂತ್ರಿ ಹೇಳಿದಂತೆ ಕಾಂಗ್ರೇಸ್ ಪಕ್ಷ ಪರಜೀವ ಪಕ್ಷ. ಸ್ವಂತ ದೇಹ ಇಲ್ಲದೇ ಕಾಂಗ್ರೇಸ್ ಪಕ್ಷ ಅತೃಪ್ತ ಆತ್ಮ ಇದ್ದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜೆಎಂಎಂ ಜೊತೆ ಇದ್ದಾರಂತಾ 12-13 ಸೀಟ್ ಬಂದಿದೆ. ಜಾರ್ಖಂಡದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ. ಉತ್ತರ ಪ್ರದೇಶ ಬೈ ಎಲೆಕ್ಷನ್ ದಲ್ಲಿ ಬಿಜೆಪಿ 9 ರಲ್ಲಿ 7 ಅಂತರ ಮಹಾರಾಷ್ಟ್ರದಲ್ಲಿ ಸಧ್ಯಕ್ಕೆ ಚನ್ನಾಗಿದೆ. ಬಿಹಾರದಲ್ಲಿ ಎನ್ ಡಿ ಎ ಚನ್ನಾಗಿದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರಸ್ ಪಕ್ಷ ಸ್ವಲ್ಪ ಚಿಗುರಿದೆ ಅಂತ ಹೇಳ್ತಿದ್ರು. ನಾವು ಸೋತು, ಅವರು ಗೆದ್ದಿದ್ದಾರೆ ಅನ್ನೋ ರೀತಿ ಮಾತನಾಡಿದ್ರು. ಕಾಂಗ್ರಸ್ ಪಕ್ಷದ ನಿರ್ಲಜ್ಜತನ, ಭಂಡತನ ನೋಡಿ ನೀವು ಎಂದರು.
ಒಂದು ಪಕ್ಷ ಅಸ್ತಿತ್ವ ಇಲ್ಲದಂತ ಸ್ಥಿತಿಗೆ ಕಾಂಗ್ರೇಸ್ ಪಕ್ಷ ಬಂದು ನಿಂತಿದೆ. ಒಂದೆರಡು ಹೆಚ್ಚು ಕಡಿಮೆ ಆಗಬಹುದು, ಇದೆ ಫೈನಲ್ ಅಲ್ಲಾ. ಉಳಿದ ಪಕ್ಷಗಳು ಕಾಂಗ್ರೇಸ್ ಪಕ್ಷವನ್ನು ಎಳೆದುಕೊಂಡು ಹೋಗ್ತಿವೆ ಎಂದ ಜೋಶಿ ಹೇಳಿದರು.