Hubli News: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಕೇಂದ್ರ ಬಜೆಟ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಏನೂ ನೀರಿಕ್ಷೆ ಇಲ್ಲ ಎಲ್ಲ ಡಬ್ಬಾ.. ಬರೋದು ಹಿಂದೂಗಳ ಬಗ್ಗೆ ಮಾತಾಡೋದು..ಹಿಂದೂ – ಮುಸ್ಲಿಂ ಸೆಂಟಿಮೆಂಟ್ ಬಿಟ್ರೆ ಏನಿಲ್ಲ..ಯಾವ ಹಿಂದೂಗಳಿಗೆ ಏನಾಗಿದೆ, ಅದರ ಡಿಟೇಲ್ಸ್ ಕೊಡ್ತಾರಾ? ಅಂತ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನೆ ಮಾಡಿದ್ದಾರೆ..
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ, ಹಾಗಾಗಿದೆ ಬಿಜೆಪಿ ಸ್ಥಿತಿ. ಮೇಕ್ ಇನ್ ಇಂಡಿಯಾದಲ್ಲಿ ಏನಾಗಿದೆ. ಏನೋ ಒಂದು ಹೇಳೋದು ಹೋಗೋದು. ಹೊಸತನದ ರಾಜಕೀಯ ಬರಬೇಕು ಅನ್ನೋದು ನನ್ನ ಅಭಿಪ್ರಾಯ .ವಾಟ್ಸಪ್ ಯುನಿವರ್ಸಿಸಿ ಫೈನಲ್ ಅಲ್ಲ. ಯುವ ಜನತೆ ಅರ್ಥ ಮಾಡಕೊಬೇಕು ದೇಶ ಬಿಜೆಪಿ ಕಾಂಗ್ರೆಸ್ ನವರ ಸ್ವತ್ತಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಇನ್ನೂ ಮುಡಾ ಹಗರಣ ಸಿಬಿಐಗೆ ನೀಡುವ ವಿಚಾರವಾಗಿ ಕೇಂದ್ರದ ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬತೀವಿ ಎಂದರು.. ನಾನು ರಾಮುಲು ಜೊತೆ ಮಾತಾಡಿಲ್ಲ.. ರಾಮುಲು ಬಂದರೆ ಸ್ವಾಗತ. ರಾಮುಲು ಮೋಸ್ಟ್ ಹಂಬಲ್ ,ರಾಮುಲು ವಂಡರ್ ಫುಲ್ ಫ್ರೆಂಡ್ ನಾನು ಪಕ್ಷಕ್ಕೆ ಬಂದರೆ ಸ್ವಾಗತ ಮಾಡ್ತೀನಿ. ನನಗೇನೂ ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್. ಯಾರಾದರೂ ಬರಬಹುದು ಹೋಗಬಹುದೆಂದು ಸಂತೋಷ್ ಲಾಡ್ ಹೇಳಿದ್ದಾರೆ.