Hubli News: ಕಾಂಗ್ರೆಸ್ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಮಾತನಾಡಿದವರ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಪೋಕ್ಸೋ ಪ್ರಕರಣದಲ್ಲ ಯಡಿಯೂರಪ್ಪ ವಿರುದ್ಧ ಇಷ್ಟು ದಿನ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ ಜೋಶಿ, ರಾಜಕೀಯ ದುರುದ್ದೇಶದಿಂದ ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವ ಪರಮೇಶ್ವರ್ ಅವರೇ ಯಡಿಯೂರಪ್ಪ ಹಿರಿಯರು. ಅವರ ಮೇಲೆ ದೂರು ಕೊಟ್ಟವರ ನಡತೆ ಸರಿಯಿಲ್ಲ ಅಂತ ಹೇಳಿದ್ದರು. ಈಗ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಬಗ್ಗೆ ಮಾತನಾಡ್ತಾರೆ. ಸುಳ್ಳು ಕೇಸು ಹಾಕಿದ್ರೆ ಜನ ನೋಡಿಕೊಳ್ಳುತ್ತಾರೆ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಅಗಿದೆ ಅಂತ ಅವರೇ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ವಿರೋಧ ಪಕ್ಷ ಬಾಯಿ ಮುಚ್ಚಿ ಕೂಡಬೇಕೆ..? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಬಾಂಗ್ಲಾ ದಲ್ಲಿ ಹಿಂದೂಗಳ ರಕ್ಷಣೆಗೆ ಒತ್ತಾಯಿಸಿ ಶ್ರೀರಾಮಸೇನೆ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಅವರು ಬಿಜೆಪಿ ಕಛೇರಿ ಬದಲಿಗೆ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿಭಟನೆ ಮಾಡಲಿ. ಬಾಂಗ್ಲಾ ಹಿಂದೂಗಳ ರಕ್ಷಣಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ರೆ ಹಿಂದೂಗಳ ರಕ್ಷಣೆ ಬಗ್ಗೆ ರಾಹುಲ್ ಗಾಂಧಿ ಬಾಯ್ಬಿಟ್ಟಿಲ್ಲ. ಸಿಎಎ ಮಾಡಿದವರೇ ನಾವು. ಇದನ್ನು ವಿರೋಧ ಮಾಡಿದವರು ಕಾಂಗ್ರೆಸ್ ನಾಯಕರು. ಬೇರೆ ದೇಶಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಹಿಂದೂಗಳಿಗೆ ಭಾರತೀಯ ಪೌರತ್ವ ಕೊಡೊ ಉದ್ದೇಶ ಸಿಎಎ ಹೊಂದಿದೆ. ಇಂಥದ್ದನ್ನು ವಿರೋಧ ಮಾಡಿದವರ ವಿರುದ್ಧ ಶ್ರೀರಾಮಸೇನೆ ಪ್ರತಿಭಟಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.