Tuesday, December 24, 2024

Latest Posts

‘ಕಾಂಗ್ರೆಸ್‌ನಿಂದ ಮಾತ್ರ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ’

- Advertisement -

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ರೈತರಿಗೆ ಮುಷ್ಕರ ಹಿಂಪಡೆಯಲು ಜಿಲ್ಲಾಡಳಿತದಿಂದ ಮನವಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮಾವೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿಮಾಚಲ ಪ್ರದೇಶದಲ್ಲಿ ಧೂಳೀಪಟ ಮಾಡಲು ಮುಂದಾಗಿದ್ದರು. ಆದರೆ ಎರಡು ಬಾರಿ ಆಡಳಿತ ನಡೆಸಿದ ಬಿಜೆಪಿಯೇ ಧೂಳೀಪಟವಾಗಿದೆ ಎಂದು ತಿಳಿಸಿದರು.

ವಿರೋಧ ಪಕ್ಷದ ಬಗ್ಗೆ ಲಘು ಹೇಳಿಕೆ ಸರಿಯಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಜಾಪ್ರಭುತ್ವವನ್ನೇ ಅಳಿಸುವ ನಿಟ್ಟಿನಲ್ಲಿ ಮಾತನಾಡುತ್ತಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸಿ ಮಾತನಾಡಬೇಕು. ಒಂದು ವಿರೋಧ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಗೃಹ ಸಚಿವರಾಗಿ ಆಡಳಿತ ನಡೆಸಲು ಲಾಯಕ್ಕಾ ಎಂಬುದನ್ನು ಯೋಚನೆ ಮಾಡಬೇಕಾಗಿದೆ ಎಂದರು.

ಎಸ್ಸಿ ,ಎಸ್ಟಿ ಸಮಾವೇಶ ಯಶಸ್ವಿಗೊಳಿಸಲು ಚಲುವರಾಯ ಸ್ವಾಮಿ ಕರೆ..

ಕಾಂಗ್ರೆಸ್‌ನಿಂದ ಮಾತ್ರ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದಾಗಲೇ ರಾಜ್ಯದ ಅಭಿವೃದ್ಧಿಯಾಗಿದೆ. ಆದರೆ ಬಿಜೆಪಿ ಸರ್ಕಾರ ಒಂದು ಬಾರಿಯೂ ಐದು ವರ್ಷ ಪೂರೈಸಿಲ್ಲ. ಮರ‍್ನಾಲ್ಕು ಸಿಎಂ ಆಗಿದ್ದಾರೆ. ಧನುರ್ಮಾಸ ಮುಗಿದ ಬಳಿಕ ಜನವರಿ ಕೊನೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಎಲ್ಲಿ ಬೇಕಾದರೂ ನಿಂತುಕೊಂಡು ಟಿಕೆಟ್ ಘೋಷಣೆ ಮಾಡುತ್ತಾರೆ. ಆದರೆ ನಮ್ಮದು ರಾಷ್ಟಿಯ ಪಕ್ಷ ಕೆಲವು ನಿಯಮಗಳಿದ್ದು, ಅದರಂತೆ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿಸಿದರು.

- Advertisement -

Latest Posts

Don't Miss