ನವದೆಹಲಿ: ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಖರ್ಗೆ, ‘ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿಜಿ ಬರೀ ಭಾಷದಲ್ಲಿ ಉದ್ದೂದ್ದ ಭಾಷಣ ಮಾಡುತ್ತಾರೆ. ಆದರೆ ಅವರ ಕೆಲಸದಲ್ಲಿ ಆ ಮಾತುಗಳು ಕಾಣಿಸುತ್ತಿಲ್ಲ’ ಎಂದಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಖರ್ಗೆ, ‘ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಕೇಂದ್ರ ಸರ್ಕಾರ ಹಿಂಜರಿಯುತ್ತಿದೆ. ಇದಕ್ಕಾಗಿ ಗಮನ ಸೇಳೆಯುವ ಉದ್ದೇಶಕ್ಕಾಗಿ, ಮೋದಿ ನೇತೃತ್ವದ ಸರ್ಕಾರ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಪ್ರತಿಪಕ್ಷಗಳಿಗೆ ತಮ್ಮ ಕಲಾಪವನ್ನು ಮಂಡಿಸಲು ಅವಕಾಶ ನೀಡುತ್ತಿಲ್ಲ’ ಎಂದು ಖರ್ಗೆ ಆರೋಪಿಸಿದ್ದಾರೆ.
ಅಲ್ಲದೇ ‘52 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ. ಹೀಗೆಯಾದರೆ ಪ್ರಜಾಪ್ರಭುತ್ವ, ಸರ್ವಾಧಿಕಾರವಾಗಿ ಬದಲಾಗತ್ತೆ’ ಎಂದು ಎಚ್ಚರಿಕೆ ನೀಡಿದ್ದಾರೆ. ’50 ಲಕ್ಷದ ಬಜೆಟನ್ನ ಕೇವಲ 12 ನಿಮಿಷದಲ್ಲಿ ಅಂಗೀಕರಿಸಲಾಗಿದೆ. ಆದರೆ ವಿಪಕ್ಷಗಳಿಗೆ ಕಲಾಪದಲ್ಲಿ ಆಸಕ್ತಿ ಇಲ್ಲವೆಂದು ಇವರು ದೂರುತ್ತಾರೆ. ಮತ್ತು ಸದನವನ್ನ ಗೊಂದಲಕ್ಕೀಡು ಮಾಡುತ್ತಾರೆ’ ಎಂದು ಖರ್ಗೆ ಆರೋಪಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ ಖರ್ಗೆ, ವಂದೇ ಭಾರತ್ ರೈಲಿನ ಬಗ್ಗೆ ವ್ಯಂಗ್ಯವಾಡಿದ ಖರ್ಗೆ, ಮೋದಿಯವರು ಹಳೇ ರೈಲಿಗೆ ಹೊಸ ಇಂಜಿನ್ ಹಾಕಿ, ಬಾವುಟ್ ಹಾರಿಸಿ, ಉದ್ದಕ್ಕೆ ಭಾಷಣ ಮಾಡುತ್ತಾರೆ ಅಷ್ಟೇ. ಆ ಕೆಲಸ ಮಾಡಲು ಮೋದಿಯೇ ಬೇಕೆ..? ಅದಕ್ಕಾಗಿ ಸ್ಥಳೀಯ ಸಂಸದರಿದ್ದಾರಲ್ಲಾ ಎಂದು ಖರ್ಗೆ ವ್ಯಂಗ್ಯವಾಡಿದರು.
‘ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ’
ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆ.