Political News:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಪ್ರೈಸ್ ಗಿ ಕುಸ್ತಿಪಟುಗಳನ್ನು ಭೇಟಿಯಾಗಿದ್ದು, ಅವರೊಂದಿಗೆ ಸಮಯ ಕಳೆದಿದ್ದಾರೆ.
ಹರಿಯಾಣಾದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮಕ್ಕೆ ರಾಹುಲ್ ಸಡನ್ ಆಗಿ ಭೇಟಿ ನೀಡಿ, ಕುಸ್ತಿಪಟುಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಗ್ರಾಮ ಕುಸ್ತಿಪಟು ದೀಪಕ್ ಪುನಿಯಾ ಅವರ ಗ್ರಾಮವಾಗಿದ್ದು, ರಾಹುಲ್‌ಗೆ ಭಜರಂಗ ಪುನಿಯಾ ಭೇಟಿಯಾಗಿದ್ದಾರೆ. ಅಲ್ಲದೇ, ಸಾಕಷ್ಟು ಕುಸ್ತಿಪಟುಗಳಿದ್ದು, ರಾಹುಲ್ ಕೂಡ ಅವರೊಂದಿಗೆ ತಮಾಷೆಗೆ ಕಾದಾಟಕ್ಕಿಳಿದಿದ್ದರು. ಈ ಫೋಟೋವನ್ನು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೇ, ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ ರಾಹುಲ್, ಅವರ ದಿನಚರಿ ಬಗ್ಗೆ, ಕುಸ್ತಿಯ ಬಗ್ಗೆ ತಿಳಿದುಕೊಂಡರು. ಜೊತೆಗೆ ಅವರೊಂದಿಗೆ ರಾಗಿ ರೊಟ್ಟಿ ಸಹ ಸವಿದರು. ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಹುಲ್, ವರ್ಷಗಳ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಸಾಟಿಯಿಲ್ಲದ ಶಿಸ್ತಿನ ಜೊತೆಗೆ ತನ್ನ ರಕ್ತ ಮತ್ತು ಬೆವರಿನಿಂದ ಮಣ್ಣನ್ನು ನೀರಾವರಿ ಮಾಡಿದ ನಂತರ, ಆಟಗಾರನು ತನ್ನ ದೇಶಕ್ಕೆ ಪದಕವನ್ನು ತಂದುಕೊಟ್ಟನು.
ಒಂದೇ ಒಂದು ಪ್ರಶ್ನೆ ಇದೆ – ಭಾರತದ ಹೆಣ್ಣುಮಕ್ಕಳಾದ ಈ ಆಟಗಾರರು ತಮ್ಮ ಅಖಾಡದಲ್ಲಿ ಹೋರಾಟವನ್ನು ಬಿಟ್ಟು ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಡಬೇಕಾದರೆ, ಅವರ ಮಕ್ಕಳನ್ನು ಈ ಮಾರ್ಗವನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವವರು ಯಾರು?
ಇವರು ರೈತ ಕುಟುಂಬದ ಮುಗ್ಧ, ನೇರ ಮತ್ತು ಸರಳ ಜನರು, ತ್ರಿವರ್ಣ ಧ್ವಜದ ಸೇವೆ ಮಾಡಲಿ. ಅವರು ಸಂಪೂರ್ಣ ಗೌರವ ಮತ್ತು ಗೌರವದಿಂದ ಭಾರತವನ್ನು ಹೆಮ್ಮೆಪಡುವಂತೆ ಮಾಡಲಿ ಎಂದು ಬರೆದುಕೊಂಡಿದ್ದಾರೆ.
वर्षों की जीतोड़ मेहनत, धैर्य एवं अप्रतिम अनुशासन के साथ अपने खून और पसीने से मिट्टी को सींच कर एक खिलाड़ी अपने देश के लिए मेडल लाता है।
आज झज्जर के छारा गांव में भाई विरेंद्र आर्य के अखाड़े पहुंच कर ओलंपिक पदक विजेता बजरंग पूनिया समेत अन्य पहलवान भाइयों के साथ चर्चा की।
सवाल… pic.twitter.com/IeGOebvRl6
— Rahul Gandhi (@RahulGandhi) December 27, 2023
‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’
‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’