ಚಾಲಕರ ಸಮಸ್ಯೆ ಆಲಿಸುತ್ತ, ಟ್ರಕ್‌ನಲ್ಲಿ ಸಂಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ..

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟ್ರಕ್ ಡ್ರೈವರ್‌ಗಳ ಕಷ್ಟ- ನಷ್ಟಗಳನ್ನು ಆಲಿಸುತ್ತ, ದೆಹಲಿಯಿಂದ ಚಂಢೀಗಢದವರೆಗೆ ಪ್ರಯಾಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಮತ್ತು ಫೋಟೋವನ್ನು ಕಾಂಗ್ರೆಸ್ ತನ್ನ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದು, ಇದರಲ್ಲಿ ರಾಹುಲ್ ಟ್ರಕ್ ಡ್ರೈವರ್‌ಗಳ ಜೊತೆ, ಮಾತನಾಡುವುದನ್ನು ನೀವು ನೋಡಬಹುದು.

ಟ್ರಕ್ ಡ್ರೈವರ್‌ಗಳು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅನ್ನುವ ಬಗ್ಗೆ ರಾಹುಲ್ ಅವರೊಂದಿಗೆ ಚರ್ಚಿಸಿದ್ದಾರೆನ್ನಲಾಗಿದೆ. ಭಾರತದಲ್ಲಿ 90 ಲಕ್ಷ ಟ್ರಕ್ ಡ್ರೈವರ್‌ಗಳಿದ್ದು, ಅವರಿಗೆ ಕೆಲಸದ ನಿಮಿತ್ತ ಬೇರೆ ಬೇರೆ ರಾಜ್ಯಗಳನ್ನ ಸುತ್ತಬೇಕಾಗಿರುತ್ತದೆ. ಈ ವೇಳೆ ಅವರಿಗೆ ಯಾವ ವಿಷಯಗಳಲ್ಲಿ ತೊಡಕುಂಟಾಗುತ್ತದೆ ಅನ್ನೋ ಬಗ್ಗೆ ರಾಹುಲ್, ಅವರ ಬಳಿ ಚರ್ಚಿಸಿದ್ದಾರಂತೆ.

ಈ ಬಾರಿ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ರಾಹುಲ್, ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಪಾದಯಾತ್ರೆ ಮಾಡಿದ್ದರು. ಅದರಂತೆ, ಕರ್ನಾಟಕದಲ್ಲಿ ಜನರ ನಂಬಿಕೆ ಗಳಿಸಿದ ಕಾಂಗ್ರೆಸ್, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಗ್ಗೆ ಮಾತನಾಡಿದ ರಾಹುಲ್‌ ನಾವು ಪ್ರೀತಿಯಿಂದ ಜನರ ಮನಸ್ಸನ್ನ ಗೆದಿದ್ದೇವೆ ಎಂದು ಹೇಳಿದ್ದರು.

ತನ್ನ ಮನೆಯ ವಾಶ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾದ ನಟ, ಮಾಡೆಲ್..

‘ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ’

‘ಮೇಡಂ ನಾನು ನಿಮಗೆ ಜಗದೀಪ್, ಉಪರಾಷ್ಟ್ರಪತಿಯಲ್ಲ’

About The Author