Friday, April 11, 2025

Latest Posts

ಕೆಸರಾದ ಕಾಲನ್ನು ಕಾರ್ಯಕರ್ತರ ಕೈಯಲ್ಲಿ ತೊಳೆಸಿದ ಕಾಂಗ್ರೆಸ್ ಅಧ್ಯಕ್ಷ: Viral Video

- Advertisement -

Political News: ಮುಂಬೈನ ನಾನಾ ಪಟೋಲೆ ಎಂಬ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಕೆಸಾರದ ಕಾಲನ್ನು ಕಾರ್ಯಕರ್ತರ ಕೈಯಲ್ಲಿ ತೊಳೆಸಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಈ ಕೆಲಸ ಮಾಡಿದ್ದಕ್ಕೆ, ಕಾಂಗ್ರೆಸ್ ಅಧ್ಯಕ್ಷರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಆಗಿದ್ದೇನೆಂದರೆ, ನಾನಾ ಪಟೋಲೆ ತಮ್ಮ ಹುಟ್ಟುಹಬ್ಬದ ಅಂಗವಾಗಿ, ತಮ್ಮ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮಕ್ಕಾಗಿ ಅಕೋಲಾದ ವಡಂಗಾವ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮಳೆ ಬಂದಿದ್ದು, ದಾರಿಯೆಲ್ಲ ಕೆಸರಾಗಿ, ಅಧ್ಯಕ್ಷರ ಕಾಲಿಗೆ ಕೆಸರು ಮೆತ್ತಿಕೊಂಡಿದೆ. ಅದನ್ನು ತಾವೇ ಕ್ಲೀನ್ ಮಾಡಿಕೊಳ್ಳುವುದು ಬಿಟ್ಟು, ಕಾರ್ಯಕರ್ತರ ಬಳಿ ಕ್ಲೀನ್ ಮಾಡಿಸಿದ್ದಾರೆ.

ಅಲ್ಲಿದ್ದ ಓರ್ವ ಕಾರ್ಯಕರ್ತ ಗೌರವ್‌ ಎಂಬಾತ ತಾನೇ ನೀರನ್ನು ತಂದು, ಅಧ್ಯಕ್ಷರ ಕಾಲು ತೊಳೆದಿದ್ದಾನೆ. ಬೇಡ ನಾನೇ ಕ್ಲೀನ್ ಮಾಡಿಕೊಳ್ಳುತ್ತೇನೆ ಅಂತಾ ಹೇಳದೇ, ಅಧ್ಯಕ್ಷರು ಕೂಡ ಚಾಕರಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಲೋಕಸಭೆ ಚುನಾವಮೆ ಬಳಿಕ ನನ್ನನ್ನು ಸುಮ್ಮನೆ ಟಾರ್ಗೇಟ್ ಮಾಡಲಾಗುತ್ತಿದೆ. ನಾನು ಕಾರ್ಯಕರ್ತನ ಬಳಿ ನೀರು ತರಲಷ್ಟೇ ಹೇಳಿದ್ದೆ. ಅವನು ನೀರು ತಂದು ಕೊಟ್ಟ ನಾನೇ ನನ್ನ ಕಾಲನ್ನು ತೊಳೆದುಕೊಂಡೆ ಎಂದು ನಾನಾ ಹೇಳಿದ್ದಾರೆ.

- Advertisement -

Latest Posts

Don't Miss