Monday, July 22, 2024

Latest Posts

Darshan case : ದರ್ಶನ್ ಕೃತ್ಯಕ್ಕೆ ಅಪ್ಪಚ್ಚು ರಂಜನ್ ಕಿಡಿ

- Advertisement -

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದರ್ಶನ್ ಮತ್ತು ಗ್ಯಾಂಗ್‍ಅನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನೇಡೆಸುತ್ತಿದ್ದಾರೆ. ಪೊಲೀಸ್ ವಿಚಾರಣೆಯ ವೇಳೆ ಹಲವಾರು ವಿಚಾರಗಳು ಬಯಲಾಗುತ್ತಿದೆ .ಇನ್ನು ಈ ವಿಚಾರಣೆಗೆ ಸಂಬಂಧ ಪಟ್ಟಂತೆ ಹಲವಾರು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ತಮ್ಮ ಅಬಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ದರ್ಶನ್ ವಿಚಾರವಾಗಿ ಮಾಜಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿಕೆಯನ್ನು ನೀಡಿದ್ದು , ಒಬ್ಬ ದುರಂಕಾರದ ವ್ಯಕ್ತಿ ಎಂದು ಕಿಡಿಕಾರಿದರು . ನಗರದಲ್ಲಿ ಸೋಮವಾರ ಮಾತನಾಡಿದ ಇವರು ಇದೊಂದೇ ಕೊಲೆ ಅಲ್ಲ, ಆತ ಮತ್ತು ಆತನ ಗ್ಯಾಂಗ್ ಬೇರೆ ಕೊಲೆ ಮಾಡಿರುವ ಸಾಧ್ಯತೆಯೂ ಇದ್ದು, ಆ ಕುರಿತು ತನಿಖೆಯಾಗಲಿ ಎಂದಿದ್ದಾರೆ.

ಅವರ ಮ್ಯಾನೇಜರ್‍ಕೂಡಾ ಕಣ್ಮರೆಯಾಗಿದ್ದಾರೆ. ಅವರನ್ನು ಇವರೇ ಕೊಂದಿರಬಹುದು. ಆದ್ದರಿಂದ ದರ್ಶನ್ ವಿರುದ್ದ ಸೂಕ್ತ ತನಿಖೆಯಾಗಬೇಕು ಎಂದು ರಂಜನ್ ಒತ್ತಾಯಿಸಿದರು. ಇನ್ನು ಇದೆ ಸಂದರ್ಭದಲ್ಲಿ ವಿರೋಧ ಪಕ್ಷದ ಆಡಳಿತದ ಬಗ್ಗೆ ಕಿಡಿಕಾರಿದರು. ಕಾಂಗ್ರೆಸ್ ಒಂದು ಭ್ರಷ್ಟ ಸರ್ಕಾರ . ಇದು ಕೊಲೆಗಡುಕರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಡಳಿತದಲ್ಲೆ 477 ಕೊಲೆ, 200 ರೇಪ್ ಕೇಸ್ ಆಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿತವಾಗಿದೆ ಎಂದ್ದಾರೆ.

- Advertisement -

Latest Posts

Don't Miss