ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕರ ಅಸಮಾಧಾನದ ಮಧ್ಯೆಯೇ ಪಕ್ಷೇತರದ ಶಾಸಕರಿಬ್ಬರಿಗೆ ಮಂತ್ರಿಗಿರಿ ಕೊಟ್ಟಾಗಿದೆ. ಆದ್ರೆ ಪಕ್ಷಕ್ಕೆ ನಿಷ್ಠೆಯಿಂದಿರುವ ಹಲವಾರು ಕಾಂಗ್ರೆಸ್ ಮುಖಂಡರು ಮೈತ್ರಿ ವಿರುದ್ಧ ತಿರುಗಿಬೀಳೋ ಎಲ್ಲಾ ಲಕ್ಷಣಗಳು ಕಾಣ್ತಿದ್ದು ಇದಕ್ಕೂ ನಾಯಕರು ಫಾರ್ಮುಲಾ ಕಂಡು ಹಿಡಿದಿದ್ದಾರೆ.
ರೆಬೆಲ್ ಲಿಸ್ಟ್ ನಲ್ಲಿರುವ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ, ಭೀಮಾ ನಾಯ್ಕ್, ಮಹೇಶ್ ಕುಮಟಳ್ಳಿ, ಎಸ್.ರಾಮಪ್ಪ ಸೇರಿದಂತೆ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿರುವ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರನ್ನೆಲ್ಲಾ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳೋಕೆ ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಇದೀಗ ಖಾಲಿ ಇರೋ 32 ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದು, ಅತೃಪ್ತರಿಗೆ ನಿಗಮಮಂಡಳಿ ಅಧ್ಯಕ್ಷಯಗಿರಿಯನ್ನಾದ್ರೂ ಕೊಟ್ಟು ಸಮಾಧಾನ ಮಾಡೋಣ ಅಂತ ಚಿಂತನೆ ನಡೆಸಿದೆ.
ಮೊದಲಿಗೆ ಈ ತಿಂಗಳ ಅಂತ್ಯದಲ್ಲಿ 10 ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲು ಚಿಂತಿಸಿದ್ದು, ಉಳಿದ 22 ನಿಗಮ ಮಂಡಳಿಗಳ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಅಧ್ಯಕ್ಷ ಹಾಗೂ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ ಅಂತ ಹೇಳಲಾಗ್ತಿದೆ.
ಆಗಿರೋ ಗಾಯಕ್ಕೆ ಮುಲಾಮು ಹಚ್ಚೋ ಕೆಲಸಕ್ಕೆ ಮುಂದಾಗ್ತಿರೋ ಕಾಂಗ್ರೆಸ್ ನಾಯಕರು ನಿಜವಾಗಿಯೂ ಅತೃಪ್ತರನ್ನು ಓಲೈಸ್ತಾರೋ ಇಲ್ಲವೋ ಅನ್ನೋದನ್ನ ಕಾದು ನೋಡಬೇಕಿದೆ.
ದೊಡ್ಡ ಗೌಡರ ಮಾಸ್ಟರ್ ಪ್ಲ್ಯಾನ್..! ಯಾರಿಗೆ ಕಾದಿದೆ ಕಂಟಕ..?? ಮಿಸ್ ಮಾಡದೇ ಈ ವಿಡಿಯೋ ನೋಡಿ