Friday, December 13, 2024

Latest Posts

‘ಎಲ್ಲಾ ಮುಗಿದ ಮೇಲೆ ಇನ್ಯಾವ ಮೈತ್ರಿ’- ಕಾಂಗ್ರೆಸ್ ಮುಖಂಡರ ಬೇಸರ

- Advertisement -

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದೀಗ ಸಮ್ಮಿಶ್ರ ಸರ್ಕಾರ ಪತನವಾಗಿರೋ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎನ್ನುವ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸ್ತಿದ್ರೆ, ಕೆಲವರು ಎಲ್ಲಾ ಮುಗಿದ ಮೇಲೆ ಇನ್ಯಾವ ಮೈತ್ರಿ ಅಂತ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿ 14 ತಿಂಗಳ ಆಡಳಿತ ನೀಡಿದ್ದು ಈಗ ಇತಿಹಾಸ. ವಿಶ್ವಾಸಮತ ಯಾಚನೆಯಲ್ಲಿ ಹಿನ್ನೆಡೆಯುಂಟಾಗಿ ಅಧಿಕಾರ ಕಳೆದುಕೊಂಡಿರೋ ದೋಸ್ತಿ ನಾಯಕರು ಮನೆ ಸೇರಿದ್ದಾರೆ. ಇನ್ನು ಶಾಸಕ ಸ್ಥಾನಕ್ಕೆ 15 ಮಂದಿ ಅತೃಪ್ತರು ರಾಜೀನಾಮೆ ನೀಡಿರೋದ್ರಿಂದ ಎದುರಾಗಲಿರುವ ಉಪಚುನಾವಣೆಯಲ್ಲಿ ಮತ್ತೆ ಮೈತ್ರಿ ಮಾಡಿಕೊಳ್ಳುತ್ತಾ ಅನ್ನೋ ಪ್ರಶ್ನೆಗೆ ಕೆಲ ಮುಖಂಡರು ಎಲ್ಲಾ ಮುಗಿದು ಹೋಯ್ತು, ಇನ್ಯಾವ ಮೈತ್ರಿ ಅಂತ ಬೇಸರ ವ್ಯಕ್ತಪಡಿಸೋ ಮೂಲಕ ಜೆಡಿಎಸ್ ಜೊತೆಗಿನ ಮೈತ್ರಿಗೆ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಇನ್ನು ಲೋಕಸಭಾ ಚುನಾವಣೆ ಸಮೀಕ್ಷಾ ವರದಿ ಬಹಿರಂಗವಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮೈತ್ರಿ ಮಾಡಿಕೊಂಡು ಕೆಟ್ಟೆವು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು. ಕೆಲ ಕಾಂಗ್ರೆಸ್ ಮುಖಂಡರು ಮೈತ್ರಿಗೆ ನಮ್ಮ ಸಹಮತವಿಲ್ಲ ಅಂತ ಹೇಳಿದ ಹೊರತಾಗಿಯೂ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿಗೆ ಇಳಿಯಿತು ಅಂತ ಆರೋಪ ಕೂಡ ಮಾಡಿದ್ರು.

- Advertisement -

Latest Posts

Don't Miss