Hubli News: ಹುಬ್ಬಳ್ಳಿ: ಕಾಂಗ್ರೆಸ್ ನವರಿಗೆ ಗೆದ್ದಾಗ ಇವಿಎಂ ದೋಷ ಕಾಣುವುದಿಲ್ಲ. ಸೋತಾಗ ಮಾತ್ರ ಕಾಂಗ್ರೆಸ್ ನಾಯಕರಿಗೆ ಇವಿಎಂ ದೋಷದಿಂದ ಸೋಲಾಗಿದೆ ಅಂತಾರೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ತೆಲಂಗಾಣ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇಲ್ಲ ಅನ್ನಬೇಕಾಗಿತ್ತು ಕಾಂಗ್ರೆಸ್. ಗೆದ್ದಾಗ ಇವಿಎಂ ಸರಿಯಾಗೆಯೇ ಕೆಲಸ ಮಾಡಿರ್ತಾವೇ. ಸೋತಾಗ ಅವರಿಗೆ ಇವಿಎಂ ದೋಷ ಕಣ್ಣಿಗೆ ಎದ್ದು ಕಾಣುತ್ತದೆ. ಕರ್ನಾಟಕದಲ್ಲಿ ನಾವು ಸೋತಾಗ ಮತದಾರರ ತೀರ್ಪು ನಾವು ಒಪ್ಪಿಕೊಂಡ್ವಿ. ಕಾಂಗ್ರೆಸ್‌ನವರ ಹಾಗೇ ನಾವು ಇವಿಎಂ ದೋಷ ಅನ್ಲೀಲ್ಲ. ಮತದಾರರ ತೀರ್ಪು ನ್ನು ಒಪ್ಪಿಕೊಳ್ಳುವ ಮನಸ್ಥಿತಿ ಕಾಂಗ್ರೆಸ್‌ನ ರಾಹುಲ್ ಸೇರಿ ಉಳಿದವರಿಗೆ ಇಲ್ಲ. ಇಂತಹ ಆಧಾರ ರಹಿತ ಆರೋಪ ಕಾಂಗ್ರೆಸ್ ಬೀಡಬೇಕು.
ಇಂದು ದೆಹಲಿ ಜನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿಗಳ ಅಭಿವೃದ್ಧಿ ಕಾರ್ಯ ಮೆಚ್ಚಿಕೊಂಡು ದೆಹಲಿ ಜನ ಮತ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಆಫ್ ಪಕ್ಷ ನಮ್ಮಗೆ ದೆಹಲಿ ಜನಾ ಅಧಿಕಾರ ನೀಡುವುದಿಲ್ಲವೆಂದು ಚಾಲೆಂಜ್ ಮಾಡಿದ್ದರು. ಆದರೆ ಪ್ರಬುದ್ಧ ಮತದಾರರು ಬಿಜೆಪಿ ವಿರೋಧಿಗಳಿ ಮತಗಳ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಮಹೇಶ್ ಹೇಳಿದ್ದಾರೆ.
ಕರ್ನಾಟಕದ ಜನತೆಯ ಪರವಾಗಿ ದೆಹಲಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ಹೋರಾಟದಿಂದ ಅಧಿಕಾರ ಹಿಡಿದು ಕೊನೆಗೆ ತಾವೇ ಭ್ರಷ್ಟಾಚಾರದಲ್ಲಿ ಆಪ್ ಮುಳಗಿತ್ತು. ಆಪ್ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಸಪೋರ್ಟ್ ಮಾಡಿತ್ತು. ಈ ಎಲ್ಲದಕ್ಕೂ ಮತದಾರ ಪ್ರಭು ತಕ್ಕ ಉತ್ತರ ನೀಡಿದ್ದಾರೆ. ರಾಜಧಾನಿಯಲ್ಲೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಒಂದು ಸೀಟು ದೆಹಲಿ ಜನತೆ ನೀಡಿಲ್ಲ. ರಾಜಧಾನಿಯಿಂದಲೇ ಕಾಂಗ್ರೆಸ್ ನಿರ್ನಾಮ ಆಗುವ ಕಾಲ ಬಂದಿದೆ. ದೆಹಲಿಯ ಜನತೆಗೆ ಬಿಜೆಪಿ ಪಕ್ಷ ಉತ್ತಮ ಆಡಳಿತದ ಜತೆಗೆ ಅಭಿವೃದ್ಧಿ ಆಡಳಿತ ನೀಡುತ್ತದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಭಿನ್ನಮತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಟೆಂಗಿನಕಾಯಿ, ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಹತ್ತು ದಿನಗಳಲ್ಲಿಸರಿ ಹೋಗುತ್ತದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಪುಟ್ಟಿದ್ದೇಳುತ್ತದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ತರೋ ನಿಟ್ಡಿನಲ್ಲಿ ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.