Saturday, October 5, 2024

Latest Posts

ಮಂಡ್ಯ ಸಿಟಿಯಲ್ಲಿ ಸುಮಕ್ಕನ ಅಬ್ಬರ- ಫ್ಲೆಕ್ಸ್ ತುಂಬೆಲ್ಲಾ ಕಾಂಗ್ರೆಸ್ಸಿಗರ ಫೋಟೋ…!

- Advertisement -

ಮಂಡ್ಯ: ಮಂಡ್ಯ ನಗರದ ತುಂಬೆಲ್ಲಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರೋ ಪಕ್ಷೇತ್ರ ಅಭ್ಯರ್ಥಿ ಸುಮಲತಾಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ಗಳೇ ರಾರಾಜಿಸುತ್ತಿವೆ. ಫ್ಲೆಕ್ಸ್ ತುಂಬಾ ಕಾಂಗ್ರೆಸ್ಸಿಗರ ಫೋಟೋಗಳಿರೋದು ವಿಶೇಷ.

ಅದ್ರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಚಲುವರಾಯ ಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರ ಫೋಟೋ ಫ್ಲೆಕ್ಸ್ ತುಂಬೆಲ್ಲಾ ಕಾಣಿಸಿಕೊಂಡಿದೆ.

ಸುಮಲತಾ ಬೆಂಬಲಿಸೋ ವಿಚಾರವಾಗಿ ‘ನಾನಲ್ಲ ನಾನಲ್ಲ.. ನಾನು ಸುಮಲತಾ ಬೆಂಬಲಿಸಿಲ್ಲ’ ಅಂತ ಆಣೆ ಪ್ರಮಾಣ ಮಾಡ್ತಿದ್ದವರೆಲ್ಲರ ಫೋಟೋ ಇದೀಗ ಸುಮಲತಾಗೆ ಶುಭ ಕೋರೋ ಫ್ಲೆಕ್ಸ್ ನಲ್ಲಿ ಕಾಣಿಸಿಕೊಂಡಿದೆ ಈ ವಿಚಾರ ಕುತೂಹಲ ಮೂಡಿಸಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇವ್ರ ಜೊತೆಗೆ ಮಂಡ್ಯ ಜಿಲ್ಲೆಯ ಪರಾಜಿತ ಅಭ್ಯರ್ಥಿ ಗಳ ಫೋಟೋಗಳು ಸಹ ರಾರಾಜಿಸುತ್ತಿರೋದು ಮತ್ತೊಂದು ವಿಶೇಷ.

ನಿಖಿಲ್ ಕುಮಾರ್,ಎಚ್ಡಿಡಿ ಸೋಲಿಗೆ ಕಾರಣವೇನು…? ಈ ವಿಡಿಯೋದಲ್ಲಿದೆ ಕಂಪ್ಲೀಟ್ ಮಾಹಿತಿ. ತಪ್ಪದೇ ನೋಡಿ.

https://www.youtube.com/watch?v=tkyk1k_xd10
- Advertisement -

Latest Posts

Don't Miss