Political News: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಏನೇ ನಿರ್ಣಯವಿದ್ದರೂ ಅದು ಒಂದು ಕುಟುಂಬವೇ ನಿರ್ಧರಿಸುತ್ತದೆ. ಒಂದು ಕುಟುಂಬದಿಂದ ಒಳ್ಳೆಯ ರಾಜಕಾರಣಿ ಗೆದ್ದರೆ, ಅದನ್ನು ನಾನು ಸ್ವಾಗತಿಸುವೆ. ಆದರೆ ಒಂದೇ ಪ್ರಾಡಕ್ಟನ್ನು ಪದೇ ಪದೇ ಲಾಂಚ್ ಮಾಡುತ್ತಿದ್ದಾರೆ. ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಯಾಗಲೇಬೇಕು. ಕುಟುಂಬ ರಾಜಕಾರಣದ ಬಗ್ಗೆ ಚರ್ಚಿಸಲು ನಾವು ಸದಾ ಸಿದ್ಧರೆಂದು ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಂಡೈರೆಕ್ಟ್ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್‌ಗೆ 10 ವರ್ಷ ವಿಪಕ್ಷ ಸ್ಥಾನವಿತ್ತು. ವಿಪಕ್ಷ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು. ಆದರೆ ಕಾಂಗ್ರೆಸ್ ಹಾಗೆ ಮಾಡಲಿಲ್ಲ. ನಾ.ಕನನ್ನು ಸಮರ್ಥವಾಗಿ ನಡೆಸಿಕೊಳ್ಳಲಿಲ್ಲ. ಖರ್ಗೆ ಲೋಕಸಭೆಗೆ ಶಿಫ್ಟ್ ಆದರು. ಗುಲಾಂ ನಭಿ ಆಜಾದ್ ಪಕ್ಷ ಬಿಟ್ಟರು. ರಾಹುಲ್ ಗಾಂಧಿಯನ್ನೇ ಪದೇ ಪದೇ ಲಾಂಚ್ ಮಾಡುವ ಭರದಲ್ಲಿ ಕಾಂಗ್ರೆಸ್ ಫೇಲ್ ಆಗಿದೆ ಎಂದು ಪ್ರಧಾನಿ ವ್ಯಂಗ್ಯವಾಡಿದ್ದಾರೆ.
ನಾವು ಯಾವುದೇ ಯೋಜನೆ ತಂದು, ಅದಕ್ಕೆ ಕಾಂಗ್ರೆಸ್‌ನವರು ವಿರೋಧ ಮಾಡುತ್ತಾರೆ. ಅದಕ್ಕೆಲ್ಲ ಕ್ಯಾನ್ಸಲ್ ಕ್ಯಾನ್ಸಲ್ ಅಂತಾರೆ. ಕಾಂಗ್ರೆಸ್‌ನಲ್ಲಿ ಕ್ಯಾನ್ಸಲ್ ಕಲ್ಚರ್ ಹೆಚ್ಚಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.