National Political News: ಆಗಾಗ ಪಾಕಿಸ್ತಾನದ ಪ್ರೇಮ ಮೆರೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಇದೀಗ ಮೊತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಪಾಕ್‌ನ ದೂತಾವಾಸ ಕಚೇರಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗಿಯಾಗುವ ಮೂಲಕ ದೇಶಾದ್ಯಂತ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ಕಚೇರಿಯು ಭಾರತದ ಕೆಲವು ಗಣ್ಯರನ್ನೂ ಸಹ ಈ ಇಫ್ತಾರ್ ಕೂಟಕ್ಕೆ ಆಹ್ವಾನಿಸಿತ್ತು, ಅದರಲ್ಲಿನ ಒಬ್ಬರಾದ ಅಯ್ಯರ್ ತಮ್ಮ ಹಾಜರಿ ದಾಖಲಿಸಿದ್ದರು. ಅಲ್ಲದೆ ತಮ್ಮ ಆಹ್ವಾನದ ಮೇರೆಗೆ ಆಗಮಿಸಿದ್ದ ಮಣಿಶಂಕರ್ ಅಯ್ಯರ್ ಅವರನ್ನು ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದ್ದರು. ಅಲ್ಲದೆ ರಂಜಾನ್ ಮಾಸದಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಇಫ್ತಾರ್ ಕೂಟದ ಆಯೋಜನೆ ಸಾಮಾನ್ಯ. ಅದೇ ರೀತಿ ಈ ಇಫ್ತಾರ್ ಕೂಟಕ್ಕೆ ಭಾರತೀಯ ಮತ್ತು ವಿದೇಶಿ ಗಣ್ಯರನ್ನೂ ಆಹ್ವಾನಿಸಲಾಗುತ್ತದೆ. ಕಳೆದ ಬಾರಿಯು ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.
ಕೈನಿಂದ ದೇಶ ವಿರೋಧಿ ಕೃತ್ಯ..
ಇನ್ನೂ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಮಣಿಶಂಕರ್ ಅಯ್ಯರ್ ಅವರ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಅಲ್ಲದೆ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ. ಇದೊಂದು ಪಾಕಿಸ್ತಾನ ಸ್ನೇಹಿ ಪಿಪಿಪಿ ಪಕ್ಷವಾಗಿದೆ ಎಂದು ವಾಗ್ದಾಳಿ ನಡಿಸಿದೆ. ಅಲ್ಲದೆ ಈ ಅಯ್ಯರ್ ಇರಲಿ ಅಥವಾ ಯಾರೇ ಆಗಲಿ ಅವರ ಮನಸ್ಸಿನಲ್ಲಿ ಪಾಕ್ ಪ್ರೇಮ ಇರುವುದು ಗೊತ್ತಾಗುತ್ತದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಟೀಕಿಸಿದ್ದಾರೆ. ಅಲ್ಲದೆ ಇಫ್ತಾರ್ ಕೂಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಭಾರಿ ಸದ್ದು ಮಾಡಿದ್ದು, ಅಯ್ಯರ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಅಲ್ಲದೆ ಅಯ್ಯರ್ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವರು ಅಯ್ಯರ್‌ಗೆ ಎರಡನೇ ಮನೆ, ಅದು ಅವರ ನೆಚ್ಚಿನ ತಾಣ ಅಲ್ಲಿಗೆ ಕಳಿಸಿಬಿಡಿ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದವರು ದಾಳಿ ಮಾಡುತ್ತಾರೆ ಎಂದಿದ್ದ ಅಯ್ಯರ್..
ಇನ್ನೂ ತಮ್ಮ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಮಣಿಶಂಕರ್ ಅಯ್ಯರ್, ಭಾರತವು ಪಾಕಿಸ್ತಾನ ಗೌರವಿಸುವುದನ್ನು ಕಲಿಯಬೇಕು, ಇಲ್ಲದಿದ್ದರೆ ಪಾಕಿಸ್ತಾನ ನಮ್ಮ ಮೇಲೆ ಪರಮಾಣು ಬಾಂಬ್ ದಾಳಿ ಮಾಡುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಈ ಹಿಂದೆ 2024ರಲ್ಲಿ ಭಾರೀ ಪ್ರಮಾಣದಲ್ಲಿ ಭಾರತೀಯರ ಆಕ್ರೋಶಕ್ಕೆ ಅಯ್ಯರ್ ಗುರಿಯಾಗಿದ್ದರು,