ಬೆಂಗಳೂರು: ಇಂದು ಕಾಂಗ್ರೆಸ್ ಪ್ರಮಾಳಿಕೆ ಬಿಡುಗಡೆಯಾಗಿದ್ದು, ಮಹಿಳೆಯರಿಗೆ ಉಪಯೋಗವಾಗುವ ಯೋಜನೆ ತರಲು ನಿರ್ಧರಿಸಿದೆ. ಬೆಂಗಳೂರಿನಲ್ಲಿಂದು ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ ಎಂಬ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸೇರಿ, ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಹಾಗಾದ್ರೆ ಬಿಜೆಪಿ ಪ್ರಣಾಳಿಕೆಯಲ್ಲಿ ಏನೇನಿದೆ ಎಂದು ನೋಡುವುದಾದರೆ,
1. ಬಿಪಿಎಲ್ ಕಾರ್ಡ್ ಇದ್ದವರಿಗೆ ಪ್ರತೀ ತಿಂಗಳು 10 ಕೆಜಿ ಅಕ್ಕಿ ನೀಡಲಾಗುತ್ತದೆ.
2. ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ನೀಡಲಾಗುತ್ತದೆ.
◆ ಮೀನುಗಾರ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
◆ ಮೀನುಗಾರಿಕೆ ಸ್ಥಗಿತ ಸಮಯದಲ್ಲಿ ಮೀನುಗಾರರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಸಹಾಯ ಧನ
◆ ನಾಡದೋಣಿ ಮೀನುಗಾರರಿಗೆ 10 ಸಾವಿರ ಹಣಕಾಸಿನ ನೆರವು
ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ‘ಮಂಗಳಮುಖಿ ಮಂಡಳಿ’ ಸ್ಥಾಪನೆ ಮಾಡುತ್ತೇವೆ. ವಾರ್ಷಿಕ 100 ಕೋಟಿ ಅನುದಾನ ಮೀಸಲಿಟ್ಟು, 3 ಲಕ್ಷದವರೆಗೆ ಸ್ವಉದ್ಯೋಗಕ್ಕೆ ಅನುದಾನ ನೀಡುತ್ತೇವೆ.
ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ಅನುಷ್ಠಾನ ಮಾಡುತ್ತೇವೆ. ಮೀಸಲಾತಿ ಪ್ರಮಾಣವನ್ನು 75%ಗೆ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು ಎಲ್ಲಾ ಅರ್ಹ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ.
◆ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ಟಾಪ್/ ಡಿಜಿಟಲ್ ನೋಟ್ ಪ್ಯಾಡ್
◆ವಿಧ್ಯಾಸಿರಿ ಯೋಜನೆಯಲ್ಲಿ ಸ್ಕಾಲರ್ ಶಿಪ್ ಮೊತ್ತ 15,000ದಿಂದ 20,000ಕ್ಕೆ ಏರಿಕೆ
◆ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾ/ಪಂ ವಿದ್ಯಾರ್ಥಿನೀಯರಿಗೆ ಉಚಿತ ದ್ವಿಚಕ್ರ ವಾಹನ
ಮಹಿಳೆ ಕುಟುಂಬದ ಶಕ್ತಿಯಷ್ಟೇ ಅಲ್ಲ, ಈ ಸಮಾಜದ, ಈ ದೇಶದ ಶಕ್ತಿ. ರಾಜ್ಯದ ಮಹಿಳೆಯರಿಗಾಗಿ ಕಾಂಗ್ರೆಸ್ ಪಕ್ಷ ವಿಶೇಷವಾಗಿ ಗೃಹಲಕ್ಷಿ ಯೋಜನೆ, ಉಚಿತ ಪ್ರಯಾಣ ಯೋಜನೆಗಳ ಮೂಲಕ ಮಹಿಳಾ ಸಭಲೀಕರಣಕ್ಕೆ ಮಹತ್ತರ ಕೊಡುಗೆ ನೀಡಲಿದೆ.
ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಮಾಸಿಕ 5000 ರೂಪಾಯಿಯ ವಿಶೇಷ ಭತ್ಯೆ ನೀಡುತ್ತೇವೆ. ಎಲ್ಲಾ ಪೊಲೀಸರಿಗೆ ವಾರ್ಷಿಕವಾಗಿ ಒಂದು ತಿಂಗಳ ವೇತನವನ್ನು ಹೆಚ್ಚುವರಿಯಾಗಿ ನೀಡುತ್ತೇವೆ.
ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಮೂಲಕ ಕನ್ನಡಿಗರ ಮನೆ, ಮನವನ್ನು ಬೆಳಗಲಿದೆ ಕಾಂಗ್ರೆಸ್.
ಕಾಂಗ್ರೆಸ್ ಪಕ್ಷದ ಘೋಷಣೆಗಳ ಸಂಕ್ಷಿಪ್ತ ಚಿತ್ರಣ:
- ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋಧಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ
- ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರೂ.ಗಳಿಂದ 15,000 ರೂಪಾಯಿಗೆ ಹೆಚ್ಚಳ
- ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರೂ.ಗಳಿಂದ 10,000 ರೂಪಾಯಿಗೆ ಏರಿಕೆ
- ಆಶಾ ಕಾರ್ಯಕರ್ತೆಯರ ನಿಶ್ಚಿತ ಗೌರವ ಧನ 5000 ರೂ.ಗಳಿಂದ 8,000 ರೂ.ಗೆ ಹೆಚ್ಚಳ
- ಬಿಸಿಯೂಟದ ಅಡಿಗೆಯವರ ಗೌರವ ಧನ 3,600 ರೂ.ಗಳಿಂದ 6,000 ರೂಪಾಯಿಗೆ ಹೆಚ್ಚಳ
- ಪೊಲೀಸ್ ವ್ಯವಸ್ಥೆಯಲ್ಲಿ ಶೇ.33ರಷ್ಟು ಮಹಿಳೆ ಇರುವಂತೆ ನೇಮಕಾತಿ. ಕನಿಷ್ಠ ಶೇ.1ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿ
- ಪ್ರತಿ ಕ್ಷೇತ್ರದಲ್ಲಿ ಶಿತಲೀಕರಣ ಘಟಕ ಸ್ಥಾಪನೆ
- ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
- ಎಪಿಎಂಸಿ ಕಾಯ್ದೆ ರದ್ಧು ಪಡಿಸುತ್ತೇವೆ
- ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
- ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
- ಸಾವಯವ ಕೃಷಿ ಯೋಜನೆಗೆ 2500ಕೋಟಿ ಹೂಡಿಕೆ
- ನೇಗಿಲ ತುಡಿತ ಹೆಸರಿನಲ್ಲಿ ಮಂಡಳಿ ಸ್ಥಾಪನೆ
- ಭಜರಂಗದಳ ನಿಷೇಧ
- ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷದವರೆಗೆ ವಿಸ್ತರಣೆ
- ಗ್ರಾಮೀಣ ಕೃಷಿಕ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
- ಪಶುಭಾಗ್ಯ- ಹಸು/ ಎಮ್ಮೆ ಖರೀದಿಗೆ ಬಡ್ಡಿರಹಿತ 3 ಲಕ್ಷ ಸಾಲ
- ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ
- ಹನಿ,ತುಂತುರು ನೀರಾವರಿಗೆ ೧೦೦ ರಷ್ಟು ಸಬ್ಸಿಡಿ
- ಸೌರ ಪಂಪ್ ಸೆಟ್ ಯೋಜನೆಗೆ ಸಬ್ಸಿಡಿ
- ಬೀದರ್,ಕಲಬುರಗಿಯಲ್ಲಿ ಕೃಷಿ ಉತ್ಪನ್ನ ಸಂಶೋಧನಾ ಸಂಸ್ಥೆ
- ಚಾಮರಾಜನಗರದಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ
- ಬೆಳಗಾವಿ, ಬಾಗಲಕೋಟೆ, ಮಂಡ್ಯದಲ್ಲಿ ಎಥೆನಾಲ್ ಘಟಕ
- ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣೆ
- ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
- ಜೇನು ಸಾಕಾಣಿಕೆಗೆ 50 ಕೋಟಿ
- ಗ್ರಾ.ಪಂ ವ್ಯಾಪ್ತಿಯಲ್ಲಿ ಯಾಂತ್ರೀಕರಣ ಸೌಲಭ್ಯ
- ಪತ್ರಕರ್ತರ ಕ್ಷೇಮಾಭಿವೃದ್ಧಿ ಸ್ಥಾಪನೆ- 500 ಕೋಟಿ
- ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ
- ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ
- ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ
- ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ
LIVE : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ, ಬೆಂಗಳೂರು https://t.co/PfpTRynh0i
— Karnataka Congress (@INCKarnataka) May 2, 2023
ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..