Dharwad News: ಧಾರವಾಡ: ನೂತನ ಸಂಸತ್ ಭವನಕ್ಕೆ ದುಷ್ಕರ್ಮಿಗಳು ನುಗ್ಗಿ ಗಲಾಟೆ ಮಾಡಿರುವ ಘಟನೆಯ ಹಿಂದೆ ಕಾಂಗ್ರೆಸ್ ಕುತಂತ್ರ ಇರಬಹುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಆಘಾತಕಾರಿ ಆಗಿದೆ. ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಆದರೆ, ಇದು ಕಾನೂನು ಬಾಹಿರವಾಗಿ ನಡೆದಿದೆ. ಭಯೋತ್ಪಾದಕ ಕೃತ್ಯದ ರೀತಿಯಲ್ಲಿ ನಡೆದಿದೆ. ಇದರ ಹಿಂದೆ ಕಾಂಗ್ರೆಸ್ ಕುತಂತ್ರ ಇರಬಹುದು. ಬುದ್ದಿಜೀವಿಗಳ ಮೂಲಕ ಕಾಂಗ್ರೆಸ್ ಹೀಗೆ ಮಾಡಿಸಿರಬಹುದು ಎಂದು ಅನುಮಾನಿಸಿದ್ದಾರೆ.
ಈ ಘಟನೆಯ ಮೂಲಕ ಸಂಸದ ಪ್ರತಾಪ್ ಸಿಂಹ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರು ದೇಶಭಕ್ತ, ರಾಷ್ಟ್ರಭಕ್ತ. ಅವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಖಲಿಸ್ತಾನದ ಲೀಡರ್ ಈ ಹಿಂದೆಯೇ 22 ವರ್ಷದ ಹಿಂದಿನ ದಾಳಿಯಂತೆ ದಾಳಿ ಮಾಡುತ್ತೇವೆ ಎಂದಿದ್ದ. ಆತನ ಆ ಹೇಳಿಕೆ ಮತ್ತು ನಿನ್ನೆಯ ಘಟನೆಗೆ ಲಿಂಕ್ ಆಗುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಘಟನೆ. ಖಲಿಸ್ತಾನ್ ಹಿನ್ನೆಲೆ ಬಗ್ಗೆಯೂ ಪರಿಶೀಲನೆ ಮಾಡಬೇಕು. ಆರು ಜನರನ್ನು ನೇರವಾಗಿ ಎನ್‌ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಸರಿಯಲ್ಲ. ಇದೊಂದು ಹಸಿ ಸುಳ್ಳು. ಹಾಗಾದಲ್ಲಿ ಜನ ಮೋದಿಗೆ ಯಾಕೆ ಮತ ಹಾಕುತ್ತಾರೆ? ಆರೂ ಜನ ಆರೋಪಿಗಳು ಬೇರೆ ಬೇರೆ ರಾಜ್ಯದವರು. ಇದು ಸರಿಯಲ್ಲ. ಇದೊಂದು ಹಸಿ ಸುಳ್ಳು. ಹಾಗಾದಲ್ಲಿ ಜನ ಮೋದಿಗೆ ಯಾಕೆ ಮತ ಹಾಕುತ್ತಾರೆ? ಆರೂ ಜನ ಆರೋಪಿಗಳು ಬೇರೆ ಬೇರೆ ರಾಜ್ಯದವರು. ಇವರೆಲ್ಲ ಹೇಗೆ ಸೇರಿದರು ಎಂಬುದೇ ಆಘಾತಕಾರಿ ಎಂದರು.
ಜೆಎನ್‌ಯುದಲ್ಲಿ ದೇಶದ್ರೋಹಿ ಘೋಷಣೆ ಹಾಕಿದ್ದರು. ಅದೇ ಮಾದರಿಯಲ್ಲೇ ಇದೂ ಸಹ ಆಗಿದೆ. ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುವ ಪ್ರವೃತ್ತಿ ಇದರಲ್ಲಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
‘ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ, ನಮ್ಮ ಎಲೆಯಲ್ಲಿ ನೊಣವನ್ನು ಹುಡುಕಿದಂತಿದೆ ಬಿಜೆಪಿಗರ ದುಸ್ಥಿತಿ’
‘ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ’