- Advertisement -
Chikkodi News: ಚಿಕ್ಕೋಡಿ: ಕಾಂಗ್ರೆಸ್ ಶಾಸಕ ರಾಜು ಕಾಗೆ ತವರೂರಲ್ಲೇ ಮೂಲಭೂತ ಸೌಕರ್ಯ ಕಾಣೆಯಾಗಿದ್ದು, ಶಾಲಾ ಮಕ್ಕಳು ಹರಿಯುವ ನೀರಿನಲ್ಲೇ ಶಾಲೆಗೆ ತೆರಳುತ್ತಿದ್ದಾರೆ. ಈ ರಸ್ತೆಗಳು ಮಳೆ ಬಂದರೆ ಹಳ್ಳದಂತಾಗುತ್ತಿದ್ದು, ಶಾಲೆಗೆ ಹೋಗಲು ಸರಿಯಾದ ರಸ್ತೆ ಇಲ್ಲದೇ, ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿರುವ ರಸ್ತೆ ಹಳ್ಳದಂತಾಗಿದ್ದು, ಸಾಕಷ್ಟು ಸಲ ಮನವಿ ಮಾಡಿದರೂ ಕೂಡ, ಜನಪ್ರತಿನಿಧಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಅಧಿಕಾರಿಗಳು, ರಾಜಕೀಯ ಗಣ್ಯರು ಈ ಸಮಸ್ಯೆ ಕಂಡರೂ ಕಾಣದಂತೆ ಇದ್ದಾರೆ.
ಈ ಪ್ರದೇಶದಲ್ಲಿ 200 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ಜನರಿಗೆ ಮಾತ್ರ, ಓಡಾಡಲು ಉತ್ತಮ ರಸ್ತೆ ಇಲ್ಲದಂತಾಗಿದೆ. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ, ಉಗ್ರ ಹೋರಾಟ ಮಾಡುವುದಾಗಿ, ಎಚ್ಚರಿಕೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
- Advertisement -