ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್ ಮಂದಿ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ನಮ್ಮ ದೇಶವನ್ನ ತುಂಬಾ ಕೆಟ್ಟದಾಗಿ ತೋರಿಸುತ್ತಾರೆಂಬುದು. ದೇಶವನ್ನ ಪಾಸಿಟಿವ್ ಆಗಿ ತೋರಿಸಬಹುದಲ್ಲ ಎಂದಿದ್ದಾರೆ. ಇಷ್ಟಕ್ಕೂ ರಿಷಬ್ ಹೀಗೆ ಹೇಳಿದ್ದೇಕೆ? ಮತ್ತು ಯಾರ ಬಗ್ಗೆ ಹೀಗೆ ಮಾತಾಡಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಜೋರಾಗಿ ಗಿರಕಿ ಹೊಡೆಯುತ್ತಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾದಲ್ಲಿ ರಿಷಬ್ ನಟನೆಗಾಗಿ ಅತ್ಯುತ್ತಮ ಪ್ರಶಸ್ತಿ ಅವಾರ್ಡ್, ಜೊತೆಗೆ ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ಕೂಡ ದೊರೆತ್ತಿದ್ದು, ಈ ಬಗ್ಗೆ ಯೂಟ್ಯೂಬ್ ಚಾನೆಲ್ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಸದ್ಯ ನಟ ರಿಷಬ್ ಶೆಟ್ಟಿ ನಿರ್ಮಾಣದ ಪ್ರಮೋದ್ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಸಿನಿಮಾದ ಪ್ರಮೋಶನ್ನಲ್ಲಿ ರಿಷಬ್ ಬ್ಯುಸಿಯಾಗಿದ್ದು, ಈ ಸಿನಿಮಾದ ಪ್ರಚಾರದ ವೇಳೆ ರಿಷಬ್ ಒಂದು ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತ್ನಾಡಿದ್ದಾರೆ. ಬಾಲಿವುಡ್ನವರು ಸಿನಿಮಾ ಮಾಡುವುದಕ್ಕೂ, ದಕ್ಷಿಣ ಭಾರತದವರು ಸಿನಿಮಾ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ‘ಇಂಡಿಯನ್ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ. ಇದೇ ಸಿನಿಮಾ ಮಾಡೋ ಆರ್ಟ್ಸ್ ಅಂತ ಅವರು ಅಂದುಕೊಂಡು ಹೊರ ದೇಶಗಳಿಗೆ ಹೋಗಿ ಅವಾರ್ಡ್ಗಳನ್ನು ಗೆದ್ದು ಬಂದಿದ್ದನ್ನು ಸಹ ನಾನು ನೋಡಿದ್ದೇನೆ. ನಮ್ಮ ದೇಶ, ನಮ್ಮ ಹೆಮ್ಮೆ, ನನ್ನ ರಾಜ್ಯ, ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರೋದನ್ನು ಪಾಸಿಟಿವ್ ನೋಟ್ನಲ್ಲಿ ತೋರಿಸಬಹುದಲ್ಲ’ಯಾಕೆ ನೆಗೆಟಿವ್ ಆಗಿ ತೋರಿಸುತ್ತಾರೆ. ಇದನ್ನೇ ನಾನು ಮಾಡಲು ಪ್ರಯತ್ನಿಸುತ್ತಿದ್ದೇನೆ ಅಂತ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರ ಈ ಹೇಳಿಕೆಯ ಕ್ಲಿಪ್ವೊಂದು ಎಲ್ಲೆಡೆ ವೈರಲ್ ಆಗಿದ್ದು, ಅನೇಕರು ರಿಷಬ್ ಹೇಳಿಕೆಯನ್ನು ನೋಡಿ ಸರಿಯಾಗಿಯೇ ಮಾತನಾಡಿದ್ದಾರೆ ಎಂದಿದ್ದಾರೆ. ರಿಷಬ್ ಶೆಟ್ಟಿ ಹೊಸಬರಿಗೆ ಅವಾಕಾಶಗಳನ್ನ ನೀಡುವುದರ ಜೊತೆಗೆ ಹೊಸ ಹೀರೋಗಳ ಸಿನಿಮಾಗಳಿಗೆ ನಿರ್ಮಾಣವನ್ನ ಮಾಡುತ್ತಿರುತ್ತಾರೆ. ಇದರಿಂದಾಗಿಯೇ ರಿಷಬ್ ಎಲ್ಲರಿಗೂ ಹತ್ತಿರವಾಗುತ್ತಾರೆ.
-ಸ್ವಾತಿ.ಎಸ್.