Saturday, March 2, 2024

Latest Posts

‘ನನ್ನ ಕ್ಷೇತ್ರಕ್ಕೆ ನೀರು ಬಿಡಿ- ಇಲ್ಲದಿದ್ರೆ ರಾಜೀನಾಮೆ ಕೊಡ್ತೀನಿ’- ಕೈ ಶಾಸಕ ಎಚ್ಚರಿಕೆ

- Advertisement -

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಜೋರಾಗಿ ನಡೆಯುತ್ತಿರೋ ಮಧ್ಯೆಯೇ ಕೈ ಶಾಸಕ ತನ್ನ ಕ್ಷೇತ್ರಕ್ಕೆ ನೀರು ಬಿಡದಿದ್ರೆ ತಾವು ರಾಜೀನಾಮೆ ಕೊಡುವುದಾಗಿ ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಮ್ಮ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ನೀರು ಹರಿಬಿಡದಿದ್ದರೆ ನಾನು ಖಂಡಿತ ರಾಜೀನಾಮೆ ನೀಡುತ್ತೇನೆ ಅಂತ ಕಾಂಗ್ರೆಸ್ ನಾಯಕರಿಗೆ ಎಚ್ಚರಿಸಿದ್ದಾರೆ. ನನಗೂ ಮತ್ತು ಇದಾಗಲೇ ರಾಜೀನಾಮೆ ನೀಡಿರುವ ಶಾಸಕರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅತೃಪ್ತ ಶಾಸಕರೊಂದಿಗೆ ಸುಮ್ಮನೆ ನನ್ನ ಹೆಸರನ್ನು ಸೇರಿಸಲಾಗಿದೆ ಅಂತ ಸುಬ್ಬಾರೆಡ್ಡಿ ಇದೇ ವೇಳೆ ಆರೋಪಿಸಿದ್ರು.

ಇನ್ನು ನನ್ನ ಕ್ಷೇತ್ರದ ಹಿತದೃಷ್ಟಿಯಿಂದಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿ ಬಳಿಕ ರಾಜೀನಾಮೆ ನೀಡೋ ಕುರಿತಾಗಿ ತೀರ್ಮಾನಿಸುವೆ. ನನ್ನ ಕ್ಷೇತ್ರದ ಜನತೆಗೆ ನೀರು ಪೂರೈಸಲು ಸಾಧ್ಯವಾಗದ ನಾನು ಶಾಸಕ ಸ್ಥಾನದಲ್ಲೇಕೆ ಇರಬೇಕು ಅಂತ ಶಾಸಕ ಇದೇ ವೇಳೆ ಪ್ರಶ್ನಿಸಿದ್ರು. ಹೀಗಾಗಿ ತಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಬಾಗೇಪಲ್ಲಿಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸೋ ಮೂಲಕ ರಾಜೀನಾಮೆ ನೀಡುವೆ ಅಂತ ಶಾಸಕ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕರಿಗೆ ಬಿಗ್ ಶಾಕ್..!!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=VAYuaFbCakE
- Advertisement -

Latest Posts

Don't Miss