Hubli news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಚಲೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಶಾಸಕರಿಗೆ ಅನುದಾನ ಕೊಡುವ ಯೋಗ್ಯತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ನಾನು ಶಾಸಕನಿದ್ದೇನೆ, 8 ತಿಂಗಳಾದರೂ ಒಂದು ಕೋಟಿ ರೂಪಾಯಿ ಅನುದಾನ ನೀಡಿಲ್ಲ. ಜನರ ದಾರಿ ತಪ್ಪಿಸುವಂತಹ ಕೆಲಸ ಸಿದ್ದರಾಮಯ್ಯನವರು ಮಾಡ್ತಾ ಬಂದಿದ್ದಾರೆ. ತಮ್ಮ ಅನುದಾನ ಎಲ್ಲಿ ಕೇಳ್ತಾರೆ ಅನ್ನೋ ಕಾರಣಕ್ಕೆ ದಾರಿ ತಪ್ಪಿಸಿ ಕೇಂದ್ರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಅವರು ಏನೇ ತಿಪ್ಪರ್ಲಾಗಾ ಹಾಕಿದ್ರು ಕೇಂದ್ರದಲ್ಲಿ ನರೇಂದ್ರ ಮೋದಿಯವರನ್ನೇ ಆರಿಸಿ ತರುವ ನಿರ್ಧಾರ ಜನ ಮಾಡಿದ್ದಾರೆ. ಸರ್ಕಾರದ ದುಡ್ಡನ್ನು ಪಕ್ಷಕ್ಕೆ, ಕಾರ್ಯಕರ್ತರಿಗೆ ಹಾಕಿ ಕೊಳ್ತಾ ಇದ್ದಾರೆ. ಅದೇ ದುಡ್ಡನ್ನು ಬರಗಾಲ, ಅಭಿವೃದ್ಧಿಗೆ ಹಾಕಲಿ. ಭ್ರಷ್ಟಾಚಾರದ ಮೂಲಕ ನಾಯಕರೆಲ್ಲಾ ಜೇಬು ತುಂಬಿಸಿಕೊಳ್ತಾ ಇದ್ದಾರೆ. ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ. ಇವರಿಗೆ ತಾವು ಲೋಕಸಭೆಯಲ್ಲಿ ಗೆಲ್ಲಲ್ಲ ಅಂತಾ ಗೊತ್ತಾಗಿದೆ. ಅದಕ್ಕೆ ಗ್ಯಾರಂಟಿ ರದ್ದಿನ ಬಗ್ಗೆ ಮಾತನಾಡ್ತಾ ಇದ್ದಾರೆ ಎಂದು ಕಾಂಗ್ರೆಸ್‌ಗೆ ಶಾಸಕ ಅರವಿಂದ್ ಬೆಲ್ಲದ್ ಟಾಂಗ್ ಕೊಟ್ಟಿದ್ದಾರೆ.
ಎಲ್.ಕೆ. ಅಡ್ವಾನಿಗೆ ಭಾರತ ರತ್ನ ಘೋಷಣೆ ವಿಚಾರದ ಬಗ್ಗೆ ಬೆಲ್ಲದ್ ಪ್ರತಿಕ್ರಿಯಿಸಿದ್ದು, ಅಡ್ವಾಣಿ ದೇಶದ ಅತ್ಯಂತ ಹಿರಿಯ ರಾಜಕಾರಣಿಗಳು. ಸಾರ್ವಜನಿಕರೊಂದಿಗೆ ಹೇಗೆ ಇರ್ಬೇಕು ಅನ್ನೋದರ ಬಗ್ಗೆ ಮಾರ್ಗದರ್ಶನ ಮಾಡಿದಂತವರು. ಅವರ ಮೇಲೆ ಚಿಕ್ಕ ಆರೋಪ ಬಂದಾಗ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ ಮಾರ್ಗದರ್ಶನ ನೀಡಿದಂತವರು. ಇಂತಹ ಹಿರಿಯರಿಗೆ ಬಂದ ಗೌರವ ಭಾರತೀಯರಿಗೆ ಬಂದ ಗೌರವ. ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಬೆಲ್ಲದ್ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದಕ್ಕೆ ಸಂಕೋಚ ಪಡಬೇಕಿಲ್ಲ: ಸಿ.ಟಿ.ರವಿ
ಕಾಂಗ್ರೆಸ್ ಸರ್ಕಾರ SSLC ಮಕ್ಕಳ ಕಿಸೆಗೂ ಕೈ ಹಾಕಿದೆ: ಮಾಜಿ ಸಿಎಂ ಕುಮಾರಸ್ವಾಮಿ