Political News: ರಾಜಕೀಯ ಪಕ್ಷಗಳು ಅಂದ್ರೆ ಹಾಗೇ. ಪ್ರತಿಪಕ್ಷಗಳ ವಿರುದ್ಧ ತಪ್ಪುಗಳನ್ನು ಹುಡುಕಿ, ಅದನ್ನು ಸರಿ ಮಾಡಿ, ಪರಿಹಾರ ನೀಡಿ ಎಂದು ಕೇಳುವುದು ರಾಜಕೀಯದ ಪದ್ಧತಿ. ಈ ಪದ್ಧತಿ ಈಗ ಕಚ್ಚಾಟವಾಗಿ ಪರಿವರ್ತನೆಯಾಗುತ್ತಿದೆ. ಅಭಿವೃದ್ಧಿ ಅಷ್ಟಕ್ಕಷ್ಟೇ ಆದರೂ, ಆರೋಪ ಪ್ರತ್ಯಾರೋಪಗಳು ಮಾತ್ರ ಸರಾಗವಾಗಿ ಸಾಗುತ್ತಿದೆ.
ಇದೀಗ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರುವುದನ್ನು ಮುಂದುವರಿಸಿದ್ದು, ಪ್ರಣಾಳಿಕೆಯಲ್‌ಲಿ ಕಾಂಗ್ರೆಸ್ ಜನರಿಗೆ ನೀಡಿದ ಭರವಸೆಯನ್ನು ಪೂರ್ಣವಾಗಿಸಿಲ್ಲ. 134 ಭರವಸೆಯಲ್ಲಿ ಕೇವಲ 9 ಭರವಸೆ ಈಡೇರಿಸಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಪ್ರಣಾಳಿಕೆ ಅಂದರೆ ಅದು ಜನರಿಗೆ ಕೊಟ್ಟ ವಾಗ್ದಾನ, ಮತದಾರರಿಗೆ ಕೊಟ್ಟ ವಚನ. ಸರ್ಕಾರದ ಅವಧಿ ಈಗಾಗಲೇ ಅರ್ಧ ಮುಗಿದಿದೆ. ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಆದರೆ ಕೊಟ್ಟ 134 ಭರವಸೆಗಳಲ್ಲಿ ಈಡೇರಿರುವುದು ಮಾತ್ರ ಕೇವಲ 9. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಈ ನಯವಂಚನೆಯನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ. ರಾಹುಲ್ ಗಾಂಧಿ ಅವರೇ, ಬರೆದಿಟ್ಟುಕೊಳ್ಳಿ. ಕರ್ನಾಟಕದಲ್ಲಿ ಇನ್ನೆಂದಿಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇದು 100% ಗ್ಯಾರೆಂಟಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

