News: ರಸ್ತೆಯಲ್ಲಿ ಸರಿಯಾಗಿ ವಾಹನ ಚಲಾಯಿಸದೇ, ಶೋಕಿ ಮಾಡಲು ವ್ಹೀಲಿಂಗ್ ಮಾಡುವ ಹಲವರು ಈಗಾಗಲೇ ಅಪಘಾತಕ್ಕೀಡಾಗಿರುತ್ತಾರೆ. ಅಥವಾ ಪೋಲೀಸರಿಂದ ಟ್ರೀಟ್‌ಮೆಂಟ್ ತೆಗೆದುಕ“ಂಡಿರುತ್ತಾರೆ. ಇಂಥ ಘಟನೆಗಳು ಅನೇಕ ನಡೆದರೂ, ಜನರಿಗೆ ಇನ್ನೂ ಬುದ್ಧಿ ಬಂದಿಲ್ಲ.
ಗರ್ಲ್‌ಫ್ರೆಂಡ್ ಜತೆ ಓರ್ವ ಯುವಕ ಹೀಗೆ ಬೈಕ್ ನಲ್ಲಿ ಹೋಗುವಾಗ, ವ್ಹೀಲಿಂಗ್ ಮಾಡಿದ್ದು, ಅಪಘಾತವಾಗಿ ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂಥ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಇಂದಿನ ಯುವ ಪೀಳಿಗೆಗೆ ಯಾವಗ ಬುದ್ಧಿ ಬರುತ್ತದೋ ಎಂದು ಬೈಯ್ಯುತ್ತಿದ್ದಾರೆ.
ಆಗಿದ್ದೇನು..?: ಈ ವೀಡಿಯೋದಲ್ಲಿ ಓರ್ವ ಯುವಕ ತನ್ನ ಗರ್ಲ್‌ಫ್ರೆಂಡ್ ಅನ್ನು ಕರೆದುಕ“ಂಡು ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿಕ“ಂಡು ಹೋಗುತ್ತಿದ್ದು, ಅವನ ಪಕ್ಕದಲ್ಲಿ ಬೇರೆ ಬೈಕ್‌ನಲ್ಲಿ ಬರುತ್ತಿದ್ದ ಸ್ನೇಹಿತರು ಅದನ್ನು ವೀಡಿಯೋ ಮಾಡುತ್ತಿದ್ದರು. ಆದರೆ ಅಚಾನಕ್ ಆಗಿ, ಹಿಡಿತ ತಪ್ಪಿ ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಅಪಘಾತವಾಗಿದೆ.
ಅಲ್ಲಿಗೆ ಅವರ ವೀಡಿಯೋ ಮಾಡುತ್ತಿದ್ದ ಯುವಕರು ಬೈಕ್ ಓಡಿಸಿಕ“ಂಡುಮುಂದೆ ಸಾಗಿದ್ದಾರೆ. ಆದರೆ ಇವರ ಹುಚ್ಚನ್ನು ಅರಿಯದ ಬೇರೆ ಬೈಕ್ ಸವಾರರು ಮುಂದೆ ಬಂದು ಇವರ ಬೈಕ್‌ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದ್ದಾರೆ. ಈ ವೇಳೆ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದಲ್ಲದೇ, ಯುವತಿಯ ಮುಖಕ್ಕೆ ಪೆಟ್ಟಾಗಿದೆ. ಅಲ್ಲದೇ, ಆಕೆಯ ಕಾಲ ಮೇಲೆ ಬೈಕ್ ಹಾದು ಹೋಗಿರುವ ಕಾರಣ, ಕಾಲಿಗೂ ತೀವ್ರ ನೋವಾಗಿದೆ.
ಇನ್ನು ಈ ಪುಂಡಾಟವನ್ನು ತಮ್ಮ ಸೆಲ್‌ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ವಾಹನ ಸವಾರರು ಊಹಿಸಲಾಗದ ಅಪಘಾತವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
72% Bikers are idiots
No proof needed
— Kreately.in (@KreatelyMedia) October 31, 2025

