Sunday, February 23, 2025

Latest Posts

ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಪಾರ್ಟಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಮುಡಾ ಹಗರಣ ಹೋರಾಟದ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಚರ್ಚೆ ಮಾಡುತ್ತಾರೆ. ಅಗತ್ಯ ಇದ್ದ್ರೆ ನಾವು ಸಭೆ ಮಾಡಿ ಮುಂದಿನ ಹೋರಾಟ ರೂಪುರೇಷೆ ರೂಪಿಸುತ್ತವೆ ಎಂದಿದ್ದಾರೆ.

ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಪಾರ್ಟಿ. ಅಮೆರಿಕ ಅಧ್ಯಕ್ಷ ಟ್ರಂಪ್ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಚೈನಾ ಅಂಬಾಸಿಡರ್ ರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರದ ಮೂಲಕ ಬೇರೆ ದೇಶದ ಜೊತೆಗೆ ಕೈ ಜೋಡಿಸಿ ದೇಶದ ಪ್ರಜಾಪ್ರಭುತ್ವ ಬುಡ ಅಲಾಡಿಸುತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕ ಇಲ್ಲ. ಬಿಜೆಪಿ ಸೋಲಿಸು ಈ ರೀತಿಯಲ್ಲಿ ಷಡ್ಯಂತರವನ್ನು ಕಾಂಗ್ರೆಸ್ ಮಾಡಿದೆ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಹಕ್ಕಿಲ್ವಾ..? ಪ್ರಜಾಪ್ರಭುತ್ವ ಬಗ್ಗೆ ಕಾಂಗ್ರೆಸ್ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮಾನಸಿಕತೆ. ನಾವು ಹೋರಾಟ ಮಾಡೇ ಮಾಡುತ್ತೇವೆ ಎಂದು ಜೋಶಿ ಹೇಳಿದ್ದಾರೆ.

ಯತ್ನಾಳ ವಿಜಯೇಂದ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ರಾಷ್ಟ್ರೀಯ ಅಧ್ಯಕ್ಷರು ಅದರ ಬಗ್ಗೆ ಮಾತನಾಡುತ್ತಾರೆ. ಜನಾರ್ದನ ರೆಡ್ಡಿ ನಿಮ್ಮನ್ನಾ ನೋಡಿ ಹೆದರಿದ್ದಾರೆ. ರೆಡ್ಡಿ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವುದು ನನಗೆ ಗೊತ್ತಿಲ್ಲ ಅವರನ್ನೆ ಕೇಳಿ. ರಾಜ್ಯಾಧ್ಯಕ್ಷರು ಆಯ್ಕೆ ಆದ ಮೇಲೆ ಕೋರ್ ಕಮಿಟಿ ಆಗುತ್ತಿದೆ ಎಂದು ಜೋಶಿ ಹೇಳಿದ್ದಾರೆ.

ಭ್ರಷ್ಟರು, ನೀಚರು, ಇವರೇ ಕಾಂಗ್ರೆಸ್ ನಲ್ಲಿದ್ದಾರೆ. ನಿತಿನ್ ಗಡ್ಕರಿ ಪ್ರಧಾನಿ ಆಗಬೇಕೆಂದ ಲಾಡ್ ಹೇಳಿಕೆ ಚೈಲ್ಡಿಶ್. ಸಂತೋಷ ಲಾಡ್ ಅವರದ್ದು ಬಾಲಿಶ, ಚೈಲ್ಡಿಶ್ ಹೇಳಿಕೆ. ಹರಿಯಾಣದಲ್ಲಿ ನಾವೇ ಗೆಲ್ಲತ್ತಿವಿ ಅಂತ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ರಾಹುಲ್ ಗಾಂಧಿ ಸೂಟು ಬೂಟ್ ತೆಗೆದುಕೊಂಡಿದ್ದರು. ಆಮೇಲೆ ಏನಾಯಿತು ಕಾಂಗ್ರೆಸ್ ಡಮ್ ಅಂತು. ನಕಲಿ ಗಾಂಧಿ ಕುಟುಂಬ ಯಾವತ್ತೂ ಲೀಡರ್ ಸ್ಥಾನ ಬಿಟ್ಟು ಕೊಡಲ್ಲ. ಹಾಳಾದ ಊರಿಗೆ ಉಳಿದವನ್ನೇ ಗೌಡ ಎನ್ನುವುದು ಕಾಂಗ್ರೆಸ್ ನಾಯಕರ ಮನಸ್ಥಿತಿ. ಮೋದಿ‌ ವಿರುದ್ಧ ಮಾತನಾಡಿದ್ರೆ ಸಂತೋಷ ಲಾಡ್ ಮಂತ್ರಿ ಸ್ಥಾನ ಉಳಿಯುತ್ತೆ ಎಂದ್ರೆ ಉಳಿಸಿಕೊಳ್ಳಲಿ. ಲಾಡ್ ರಾಹುಲ್ ಗಾಂಧಿ ತರ ಮಾತನಾಡೋದು ನಿಲ್ಲಿಸಿ‌. ನೀವು ಚುನಾವಣೆ ಬಳಿಕ ಜಿರೋ ಆಗುತ್ತಿದ್ದಿರಿ ಲಾಡ್ ಅವರೇ. ಈ ರೀತಿ ಅಪ್ರಭುದ್ಧ ಹೇಳಿಕೆ ನೀಡಿ. ಲಾಡ್ ಹೇಳಿಕೆ ಬಗ್ಗೆ ನೋಡಿದರೆ ಕನಿಖರ ಉಂಟಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

- Advertisement -

Latest Posts

Don't Miss