ಕಾಂಗ್ರೆಸ್ ನಿಂದ ಬೆಲೆ ಏರಿಕೆ ಜನ್ರಿಗೆ ಹೊರೆ! CN Ashwath Narayan Kannada Podcast

Political News: ಬಿಜೆಪಿ ಹಿರಿಯ ನಾಯಕ ಅಶ್ವತ್ಥ ನಾರಾಯಣ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದವರು ಅಭಿವೃದ್ಧಿಯೂ ಮಾಡುತ್ತಿಲ್ಲ, ಆಡಳಿತವೂ ಉತ್ತಮವಿಲ್ಲ. ಬೆಲೆ ಏರಿಕೆಯಾಗಿದೆ. ಆದರೆ ಅದು ಆಗಬಾರದಿತ್ತು. ಇದರಿಂದ ಅವರು ಸಾಲ ಭರಿಸಲು, ನಷ್ಟ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಸರಿಯಾದ ಆಡಳಿತ ನೀಡಿದ್ದಲ್ಲಿ, ಸಾಲ ತನ್ನಿಂದ ತಾನೇ ತೀರುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರದವರು ಅಭಿವೃದ್ಧಿಯೂ ಮಾಡುತ್ತಿಲ್ಲ. ಆಡಳಿತವೂ ಮಾಡುತ್ತಿಲ್ಲವೆಂದು ಅಶ್ವತ್ಥ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಪರ್ಟಿ ಟ್ಯಾಕ್ಸ್ ಹೆಚ್ಚಾಗಿದೆ. ನೀರಿನ ಬಿಲ್, ವಿದ್ಯುತ್ ಬಿಲ್ ಹೆಚ್ಚಾಗಿದೆ. ಎಲ್ಲ ಫೀಸ್ ಹೆಚ್ಚಾಗಿದೆ. ಹಾಲಿನ ಬೆಲೆ ಹೆಚ್ಚಿಸಿದ್ದಾರೆ, ಆದರೆ ಅದನ್ನು ಉತ್ಪಾದಕರಿಗೆ ನೀಡಿಲ್ಲ. ಬರೀ ದುಡ್ಡು ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆಂದು ಅಶ್ವತ್ಥ್ ನಾರಾಯಣ್ ಆರೋಪಿಸಿದ್ದಾರೆ.

About The Author